HEALTH TIPS

ಕೊರೋನಾ; ರಾಜ್ಯದಲ್ಲಿ ಇಂದು 885 ಮಂದಿಗೆ ಸೋಂಕು ಪತ್ತೆ


        ತಿರುವನಂತಪುರಂ: ಕೇರಳದಲ್ಲಿ ಇಂದು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇಂದು 885 ಮಂದಿಹೆ ಸೋಂಕು ಪತ್ತೆಯಾಗಿದೆ. ತಿರುವನಂತಪುರ 131, ಎರ್ನಾಕುಳಂ 122, ಕೊಟ್ಟಾಯಂ 88, ಕೊಲ್ಲಂ 86, ಪತ್ತನಂತಿಟ್ಟ 79, ಕೋಝಿಕ್ಕೋಡ್ 77, ಇಡುಕ್ಕಿ 72, ತ್ರಿಶೂರ್ 57, ಆಲಪ್ಪುಳ 38, ಮಲಪ್ಪುರಂ 38, ಕಣ್ಣೂರು 34, ಪಾಲಕ್ಕಾಡ್ 32, ವಯನಾಡ್ 21, ಕಾಸರಗೋಡು 10 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ.
        ಕಳೆದ 24 ಗಂಟೆಗಳಲ್ಲಿ 21,188 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 25,685 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ.  ಇವರಲ್ಲಿ 24,766 ಮಂದಿ ಮನೆ/ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 919 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಇಂದು ಒಟ್ಟು 135 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
       ಪ್ರಸ್ತುತ, 8846 ಕೊರೋನಾ ಪ್ರಕರಣಗಳಲ್ಲಿ, ಕೇವಲ 9.8 ಶೇಕಡಾ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಇಬ್ಬರು ಮೃತರಾಗಿದ್ದಾರೆ.  ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 4 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 9 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 66,808ಕ್ಕೆ ಏರಿಕೆಯಾಗಿದೆ.
       ಇಂದು ದೃಢಪಟ್ಟಿರುವ ನಾಲ್ಕು ಪ್ರಕರಣಗಳು ಹೊರ ರಾಜ್ಯದಿಂದ ಬಂದವರು.  ಸಂಪರ್ಕದಿಂದ 826 ಮಂದಿ ಜನರಿಗೆ ಸೋಂಕು ತಗುಲಿದೆ.  41 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಹದಿನಾಲ್ಕು ಮಂದಿ  ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ.
       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1554 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 196, ಕೊಲ್ಲಂ 103, ಪತ್ತನಂತಿಟ್ಟ 101, ಆಲಪ್ಪುಳ 120, ಕೊಟ್ಟಾಯಂ 149, ಇಡುಕ್ಕಿ 12, ಎರ್ನಾಕುಳಂ 290, ತ್ರಿಶೂರ್ 125, ಪಾಲಕ್ಕಾಡ್ 23, ಮಲಪ್ಪುರಂ 51, ಕೋಝಿಕ್ಕೋಡ್ 195, ವಯನಾಡ್ 73, ಕಣ್ಣೂರು 89, ಕಾಸರಗೋಡು 27 ಎಂಬಂತೆ ಗುಣಮುಖರಾಗಿದ್ದಾರೆ.
       ಇದರೊಂದಿಗೆ 8846 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 64,44,624 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries