ತಿರುವನಂತಪುರ: ರಾಜ್ಯದಲ್ಲಿ ಇಂದು 966 ಮಂದಿಗೆ ಕೊರೊನಾ ದೃಢಪಟ್ಟಿದೆ. ಎರ್ನಾಕುಳಂ 200, ತಿರುವನಂತಪುರ 130, ಕೊಲ್ಲಂ 102, ಕೊಟ್ಟಾಯಂ 102, ತ್ರಿಶೂರ್ 74, ಕೋಝಿಕ್ಕೋಡ್ 71, ಇಡುಕ್ಕಿ 67, ಪತ್ತನಂತಿಟ್ಟ 65, ಆಲಪ್ಪುಳ 34, ಕಣ್ಣೂರು 34, ಮಲಪ್ಪುರಂ 34, ಮಲಪ್ಪುರಂ 34, ವಯನಾಡ್ 21, ಕಾಸರಗೋಡು 9 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 25,946 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 22,834 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 22,053 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 781 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. 108 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 7536 ಕೊರೋನಾ ಪ್ರಕರಣಗಳಲ್ಲಿ, ಕೇವಲ 9.6 ಶೇಕಡಾ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಐವರು ಮೃತರಾಗಿದ್ದಾರೆ. ಇದಲ್ಲದೆ, ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ ಹಿಂದಿನ ದಿನಗಳಲ್ಲಿ ಏಳು ಸಾವುಗಳು ಮತ್ತು ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 38 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,008ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ದೃಢಪಟ್ಟಿರುವ ನಾಲ್ಕು ಪ್ರಕರಣಗಳು ಹೊರ ರಾಜ್ಯದಿಂದ ಬಂದವರು. ಸಂಪರ್ಕದಿಂದ 916 ಮಂದಿ ಜನರಿಗೆ ಸೋಂಕು ತಗುಲಿದೆ. 42 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ನಾಲ್ವರು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 1444 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 183, ಕೊಲ್ಲಂ 96, ಪತ್ತನಂತಿಟ್ಟ 58, ಆಲಪ್ಪುಳ 72, ಕೊಟ್ಟಾಯಂ 212, ಇಡುಕ್ಕಿ 88, ಎರ್ನಾಕುಳಂ 345, ತ್ರಿಶೂರ್ 82, ಪಾಲಕ್ಕಾಡ್ 22, ಮಲಪ್ಪುರಂ 34, ಕೋಝಿಕ್ಕೋಡ್ 61, ವಯನಾಡ್ 77, ಕಣ್ಣೂರು 85 ಮತ್ತು ಕಾಸರಗೋಡು 29 ಮಂದಿ ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 7536 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 64,48,699 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ.