ಕೇವ್ : ಇಂದಿಗೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಏಳನೇ ದಿನಗಳಾಗಿವೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ(Volodymyr Zelenskyy) ಬುಧವಾರ, '6 ದಿನಗಳಲ್ಲಿ ಸುಮಾರು 6,000 ರಷ್ಯನ್ನರು' ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಶೆಲ್ ದಾಳಿಯಲ್ಲಿರುವ ಉಕ್ರೇನ್ʼನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ʼನಲ್ಲಿ ರಷ್ಯಾದ ವಾಯುಗಾಮಿ ಪಡೆಗಳು ಬಂದಿಳಿದಿರುವಂತೆಯೇ ಝೆಲೆನ್ಸ್ಕಿ ಹೇಳಿದ್ದಾರೆ.
Ukraine's President Volodymyr Zelenskyy says almost 6000 Russians killed in 6 days of war: Reuters
(file pic) pic.twitter.com/n3yF1AjC35
— ANI (@ANI)
ಕಳೆದ 24 ಗಂಟೆಗಳಲ್ಲಿ ಶೆಲ್ ದಾಳಿಯಲ್ಲಿ ಕನಿಷ್ಠ 21 ಜನರು ಮೃತ ಪಟ್ಟಿದ್ದಾರೆ. ಇನ್ನು 112 ಜನರು ಗಾಯಗೊಂಡಿದ್ದಾರೆ ಎಂದು ನಗರ ಮೇಯರ್ ಹೇಳಿದರು. ದಿನದ ಆರಂಭದಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್, ತಮ್ಮ ಮೊದಲ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣಕ್ಕೆ ವ್ಲಾದಿಮಿರ್ ಪುಟಿನ್ ಅವರನ್ನ 'ಬೆಲೆ ತೆರುವುದಾಗಿ' ಪ್ರತಿಜ್ಞೆ ಮಾಡಿದರು.