ಮಲಪ್ಪುರಂ: ಪಾಣಕ್ಕಾಡ್ ಸಾದಿಕಲಿ ಶಿಹಾಬ್ ಅವರು ಮುಸ್ಲಿಂ ಲೀಗ್‌ನ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಲೀಗ್‌ನ ರಾಷ್ಟ್ರೀಯ ಅಧ್ಯಕ್ಷ ಖಾದರ್ ಮೊಯಿನ್ ಈ ಘೋಷಣೆ ಮಾಡಿದ್ದಾರೆ. ದಿವಂಗತ ಹೈದರಾಲಿ ಅವರ ನಿವಾಸದಲ್ಲಿ ನಡೆದ ಮುಸ್ಲಿಂ ಲೀಗ್ ರಾಜ್ಯ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಕ್ಷದ ರಾಷ್ಟ್ರೀಯ ರಾಜಕೀಯ ಸಲಹಾ ಮಂಡಳಿಯ ಅಧ್ಯಕ್ಷರಾಗಿಯೂ ಸಾದಿಕಲಿ ಆಪಯ್ಕೆಯಾಗಿದ್ದಾರೆ. ಎರಡೂ ಸ್ಥಾನಗಳನ್ನು ಹಿಂದೆ ಹೈದರ್ ಅಲಿ ಅವರೇ ಹೊಂದಿದ್ದರು.