ನವದೆಹಲಿ: ಕೇರಳದ ಆದಿವಾಸಿಗಳ ಅಭ್ಯುದಯಕ್ಕಾಗಿ ಸುರೇಶ್ ಗೋಪಿ ಅವರು ನಿನ್ನೆ ರಾಜ್ಯಸಭೆಯಲ್ಲಿ ಮಾಡಿದ ಭಾಷಣ ವೈರಲ್ ಆಗಿದೆ. ರಾಜ್ಯಸಭೆಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನUಯ ಅಲೆ ಸೃಷ್ಟಿಸಿದೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸುರೇಶ್ ಗೋಪಿ ಅವರಿಗೆ ಕೇಳಿದ ಪ್ರಶ್ನೆ ಸದನದಲ್ಲಿ ನಗೆಗಡಲಲ್ಲಿ ತೇಲಿಸಿತು. ವೆಂಕಯ್ಯ ನಾಯ್ಡು ಅವರು ಸುರೇಶ್ ಗೋಪಿ ಅವರ ಗಡ್ಡವನ್ನು ನೋಡಿ, ನೀವು ಮಾಸ್ಕ್ ಧರಿಸಿದ್ದೀರಾ ಎಂದು ಕೇಳಿದರು. ಹೊಸ ಸಿನಿಮಾಗೆ ಇದುವೇ ತನ್ನ ಹೊಸ ಲುಕ್ ಎಂದು ಸುರೇಶ್ ಗೋಪಿ ನಗುತ್ತಾ ಉತ್ತರಿಸಿದರು. ವೆಂಕಯ್ಯ ನಾಯ್ಡು ಅವರಿಗೆ ಉತ್ತರಿಸಿದ ನಂತರ ನಟ ತಮ್ಮ ಭಾಷಣವನ್ನು ಪ್ರಾರಂಭಿಸಿದರು.
ನಿರ್ದೇಶಕ ಜೋಶಿ ಹಾಗೂ ಸುರೇಶ್ ಗೋಪಿ ಅಭಿನಯದ ಪಪ್ಪನ್ ಚಿತ್ರದ ಲುಕ್. ಏಳು ವರ್ಷಗಳ ನಂತರ ಜೋಶಿ ಮತ್ತು ಸುರೇಶ್ ಗೋಪಿ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರವು ಕ್ರೈಂ ಥ್ರಿಲ್ಲರ್ ಆಗಿ ಮೂಡಿಬರುತ್ತಿದೆ. ಪಪ್ಪನ್ ಸುರೇಶ್ ಗೋಪಿ ಅವರ 252ನೇ ಚಿತ್ರ. ವಾಳುತ್ತೋಳ್, ಕ್ರಿಶ್ಚಿಯನ್ ಬ್ರದರ್ಸ್ ಸೇರಿದಂತೆ ಹಲವು ಚಿತ್ರಗಳು ಇಬರಿಬ್ಬರ ಜಂಟಿಯಲ್ಲಿ ಮೂಡಿಬಂದ ಪ್ರಸಿದ್ದ ಚಿತ್ರಗಳಾಗಿವೆ.