ನವದೆಹಲಿ: ಪಂಚರಾಜ್ಯ ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಇದೀಗ ಮತ್ತೆ ನಿರಂತರವಾಗಿ ಮುಂದುವರೆದಿದ್ದು, ಸೋಮವಾರ ಕೂಡ ಪೆಟ್ರೋಲ್ ದರ 30 ಪೈಸೆ ಮತ್ತು ಡೀಸೆಲ್ ದರ 35 ಪೈಸೆ ಏರಿಕೆ ಕಂಡಿದೆ.
ಈ ಮೂಲಕ 7 ದಿನಗಳಲ್ಲಿ 6 ಬಾರಿ ಏರಿಕೆ ಕಂಡಿದೆ. 6 ದಿನದಲ್ಲಿ ಪೆಟ್ರೋಲ್ ರೂ.3.95, ಡೀಸೆಲ್ ರೂ.4.10 ಏರಿಕೆಯಾದಂತಾಗಿದೆ.
6 ಬಾರಿ ಏರಿಕೆ ಬಳಿಕ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ ರೂ. 99.41 ರೂಪಾಯಿ, ಲೀಟರ್ ಡೀಸೆಲ್ ಬೆಲೆ 90.44 ರೂಪಾಯಿಗೆ ತಲುಪಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 31 ಪೈಸೆ ಹೆಚ್ಚಳ ಮಾಡಲಾಗಿದ್ದು, ಲೀಟರ್ ಡೀಸೆಲ್ ಬೆಲೆ 37 ಪೈಸೆ ಹೆಚ್ಚಳವಾಗಿದೆ. ಅದರ ಅನ್ವಯ ಮುಂಬೈ ಲೀಟರ್ ಪೆಟ್ರೋಲ್ 114.19 ರೂಪಾಯಿ ಹಾಗೂ ಡೀಸೆಲ್ 98.50 ರೂಪಾಯಿ ಆಗಿದೆ.
ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 105.18 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.33 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 108.85 ಮತ್ತು 93.92 ರೂಪಾಯಿ ದಾಖಲಾಗಿದೆ.