ಕಾಸರಗೋಡು: ಐದು ದಿವಸಗಳ ಕಾಲ ನಡೆದ ಕಣ್ಣೂರು ವಿವಿ ಯೂನಿಯನ್ ಕಲೋತ್ಸವದಲ್ಲಿ ಪಯ್ಯನ್ನೂರ್ ಕಾಲೇಜು ಸತತ ಹತ್ತನೇ ಬಾರಿಗೆ ಚಾಂಪ್ಯನ್‍ಶಿಪ್ ತನ್ನ ಮುಡಿಗೇರಿಸಿಕೊಂಡಿದೆ. ಪಯ್ಯನ್ನೂರ್ ಕಾಲೇಜು 258ಅಂಕಗಳೊಂದಿಗೆ ಪ್ರಥಮ, 222ಅಂಕಗಳೊಂದಿಗೆ ಶ್ರೀ ನಾರಾಯಣ ಕಾಲೇಜು ದ್ವಿತೀಯ ಹಾಗೂ 207ಅಂಕಗಳೊಂದಿಗೆ ಕಾಞಂಗಡು ನೆಹರೂ ಕಾಲಾಜು ತೃತೀಯ ಸಥಾನ ಪಡೆದುಕೊಂಡಿದೆ. ಅತಿಥೇಯ ಕಾಸರಗೋಡು ಸರ್ಕಾರಿ ಕಾಲೇಜು 163ಅಂಕಗಳನ್ನು ಗಳಿಸಿದೆ. ಶಾಸಕ ಎನ್.ಎ ನೆಲ್ಲಿಕುನ್ನು ಸಮಾರೋಪ ಸಮಾರಂಭ ಉದ್ಘಾಟಿಸಿದರು. ಸಿನಿಮಾ ನಟ ಪ್ರೇಮ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವಿಜೇತ ತಂಡಗಳಿಗೆ ಶಾಕ ಎನ್.ಎ ನೆಲ್ಲಿಕುನ್ನು ಹಾಗೂ ಪ್ರೇಮ್‍ಕುಮಾರ್ ಬಹುಮಾನ ವಇತರಿಸಿದರು. ಸಿಂಡಿಕೇಟ್ ಸದಸ್ಯರಾದಶೋಕನ್, ಎಂ.ಸಿ ರಾಜು, ಡಾ> ರಾಖಿರಾಘನ್, ಡಾ. ಅಶ್ರಫ್ ಟಿ.ಪಿ. ಪ್ರಮೋದ್‍ಕುಮಾರ್ ಕೆ.ವಿ, q. ಜಯಕುಮಾರ್ ಪಿ.ಪಿ, ಸೆನೆಟ್ ಸದಸ್ಯರಾದ ಡಾ. ವಿಜಯನ್ ಕೆ.ಎಂ, ಎಂಪಿಎ ರಹೀಂ, ರಿಜಿಸ್ಟ್ರಾರ್ ಡಾ. ಜೋಬಿ ಮುಂತಾದವರು ಉಪಸ್ಥಿತರಿದ್ದರು. ಶಿಲ್ಪಾ ಕೆ.ವಿ ಸ್ವಾಗತಿಸಿದರು. ಕೆ. ಅಭಿರಾಮ್ ವಂದಿಸಿದರು.