ಕೊಚ್ಚಿ: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಕೇರಳ ಹೈಕೋರ್ಟ್ ಮಹಿಳಾ ಪೀಠ ಪೂರ್ಣಪ್ರಮಾಣದಲ್ಲಿದ್ದು ಇತಿಹಾಸ ನಿರ್ಮಿಸಿತು. ಹೈಕೋರ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ನ್ಯಾಯಮೂರ್ತಿಗಳ ಪೂರ್ಣ ಪೀಠ ಹಾಜರಿದ್ದುದು ವಿಶೇಷವಾಗಿದೆ.ನ್ಯಾಯಮೂರ್ತಿಗಳಾದ ಅನು ಶಿವರಾಮನ್, ವಿ ಶೆರ್ಸಿ ಮತ್ತು ಎಂಆರ್ ಅನಿತಾ ಅವರು ಮಹಿಳಾ ಪೂರ್ಣ ಪೀಠದಲ್ಲಿರುವವರು.
ಸರ್ಕಾರದ ಪರಿಹಾರ ನಿಧಿಗೆ ಗುರುವಾಯೂರು ದೇವಸ್ವಂ ನಿಧಿ ದೇಣಿಗೆ ನೀಡಿದ ಹೈಕೋರ್ಟ್‌ನ ಪೂರ್ಣ ಪೀಠದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿರುವ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ಮಹಿಳಾ ಪೂರ್ಣ ಪೀಠ ಇಂದು ಪರಿಗಣಿಸಿತು.