ಕಾಞಂಗಾಡು: ಕಾಸರಗೋಡಿನಲ್ಲಿ ಒಂದೇ ಶಾಲೆಯ ಏಳು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೇಕಲ ಮತ್ತು ಅಂಬಲತ್ತರ ಠಾಣೆಗಳಲ್ಲಿ ಏಳು ಪೋಕ್ಸೊ ಪ್ರಕರಣಗಳು ದಾಖಲಾಗಿವೆ.
ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್ ತರಗತಿಯಲ್ಲಿ ಮಕ್ಕಳು ವರ್ಷಗಳ ಹಿಂದೆ ಅನುಭವಿಸಿದ ದೌರ್ಜನ್ಯದ ಬಗ್ಗೆ ಬಹಿರಂಗಪಡಿಸಿದ್ದಾರೆ. ವರ್ಷಗಳ ಹಿಂದೆ ಕಿರುಕುಳ ನಡೆದಿರುವ ಬಗ್ಗೆ ಚೈಲ್ಡ್ ಲೈನ್ ಮಧ್ಯ ಪ್ರವೇಶಿಸಿ ಪೊಲೀಸರಿಗೆ ದೂರು ನೀಡಿತ್ತು. ಪೊಲೀಸರು ನಾಲ್ವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಶಾಲೆಯಲ್ಲಿ ನಡೆದ ಪೊಕ್ಸೋ ಜಾಗೃತಿ ತರಗತಿಯಲ್ಲಿ ತರಗತಿ ನೀಡಿದ ಅಧಿಕಾರಿ ಕಿರುಕುಳದ ಯತ್ನಗಳು ನಡೆದರೆ ಬಹಿರಂಗವಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ಏಳು ವಿದ್ಯಾರ್ಥಿಗಳು ಕಿರುಕುಳದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.