ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಏಳು-ಬೀಳುಗಳು ಹಾಗೂ ಆಡಳಿತ ವೈಖರಿಯನ್ನು ಕಟ್ಟಿಕೊಡುವ ಕೃತಿ 'ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ' ಮುಂದಿನ ತಿಂಗಳು ಮಾರಕಟ್ಟೆಗೆ ಬರಲಿದೆ.
'ಮೋದಿ ಸಂಪುಟದ ಸಹೋದ್ಯೋಗಿಗಳು, ಸಮಾಜದ ವಿವಿಧ ಸ್ತರದ ಪ್ರಮುಖ ವ್ಯಕ್ತಿಗಳು ಹಾಗೂ ಬೇರೆಬೇರೆ ಕ್ಷೇತ್ರಗಳ ತಜ್ಞರು ಬರೆದಿರುವ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
ಫೆಬ್ರುವರಿಯಲ್ಲಿ ನಿಧನರಾದ, ಗಾಯಕಿ ಲತಾ ಮಂಗೇಷ್ಕರ್ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಗೃಹ ಸಚಿವ ಅಮಿತ್ ಶಾ, ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಅಪೋಲೊ ಆಸ್ಪತ್ರೆಗಳ ಸಮೂಹದ ಶೋಭನಾ ಕಾಮಿನೇನಿ, ಬ್ಯಾಂಕಿಂಗ್ ಉದ್ಯಮಿ ಉದಯ್ ಕೋಟಕ್, ನೀತಿ ಆಯೋಗದ ಮಾಜಿ ಅಧ್ಯಕ್ಷ ಅರವಿಂದ ಪನಗರಿಯಾ, ಹೃದ್ರೋಗ ತಜ್ಞ ಡಾ.ದೇವಿಪ್ರಸಾದ್ ಶೆಟ್ಟಿ, ಇನ್ಫೊಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ ಸೇರಿದಂತೆ ಅನೇಕ ಗಣ್ಯರ ಲೇಖನಗಳನ್ನು ಈ ಕೃತಿ ಒಳಗೊಂಡಿದೆ ಎಂದೂ ಸಂಸ್ಥೆ ತಿಳಿಸಿದೆ.
ಈ ಕೃತಿ ಒಟ್ಟು ಐದು ಭಾಗಗಳನ್ನು ಹೊಂದಿದೆ. 'ಪೀಪಲ್ ಫರ್ಸ್ಟ್', 'ಪಾಲಿಟಿಕ್ಸ್ ಆಫ್ ಯುನಿಟಿ ಆಯಂಡ್ ಡೆವಲೆಪ್‌ಮೆಂಟ್', 'ಜನ್ ಧನ್: ಆಯನ್ ಎಕಾನಮಿ ಫಾರ್ ಎವರಿವನ್', 'ಎ ನ್ಯೂ ಪ್ಯಾರಾಡೈಮ್ ಇನ ಗವರ್ನನ್ಸ್' ಹಾಗೂ 'ವಸುಧೈವ ಕುಟುಂಬಕಂ: ಇಂಡಿಯಾ ಆಯಂಡ್ ದಿ ವರ್ಲ್ಡ್' ಎಂದು ವಿಂಗಡಿಸಲಾಗಿದೆ.