ಹೈದರಾಬಾದ್: ಹೀಗೂ ಉಂಟೇ ಎನ್ನುವಂತಹ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ. 36 ವರ್ಷದ ಆಟೋ ಟ್ರಾಲಿ ಚಾಲಕನೊಬ್ಬ ಸುಲಭವಾಗಿ ಸಾಗಿಸಬಹುದಾದಂತಹ ಸಾರ್ವಜನಿಕ ಟಾಯ್ಲೆಟ್ ಅನ್ನು ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.
ಹೈದರಾಬಾದ್: ಹೀಗೂ ಉಂಟೇ ಎನ್ನುವಂತಹ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ. 36 ವರ್ಷದ ಆಟೋ ಟ್ರಾಲಿ ಚಾಲಕನೊಬ್ಬ ಸುಲಭವಾಗಿ ಸಾಗಿಸಬಹುದಾದಂತಹ ಸಾರ್ವಜನಿಕ ಟಾಯ್ಲೆಟ್ ಅನ್ನು ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.
ಚಾಲಕನನ್ನು ಎಂ. ಜೋಗಯ್ಯ ಎಂದು ಗುರುತಿಸಲಾಗಿದೆ.
ಇದಾದ ಬಳಿಕ ಟಾಯ್ಲೆಟ್ ಅನ್ನು 45 ಸಾವಿರಕ್ಕೆ ಮುಶೀರಾಬಾದ್ನಲ್ಲಿರುವ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದರು. ಹಣವನ್ನು ತನ್ನ ವೈಯಕ್ತಿಕ ಖರ್ಚಿಗಾಗಿ ಜೋಗಯ್ಯ ಇಟ್ಟುಕೊಂಡಿದ್ದ. ಸ್ಥಳೀಯರ ದೂರಿನ ಆಧಾರದ ಮೇಲೆ ಜಿಎಂಎಚ್ಸಿ ಉಪ ಪೊಲೀಸ್ ಆಯುಕ್ತ ಜಿ. ರಾಜು ಅವರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಕ್ಯಾಮೆರಾಗಳ ನೆರವಿನಿಂದ ಜೋಗಯ್ಯನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಹಣವನ್ನು ವಶಕ್ಕೆ ಪಡೆದು, ಆಟೋ ಟ್ರಾಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೀಗ ತಲೆಮರೆಸಿಕೊಂಡಿರುವ ಆರೋಪಿ ಜೋಗಯ್ಯನ ಮತ್ತಿಬ್ಬರು ಸಹಚರರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.