HEALTH TIPS

ಚೀನಾದಲ್ಲಿ ಕರೊನಾ ಅಬ್ಬರ, ವರ್ಷದ ಬಳಿಕ ಇಬ್ಬರ ಬಲಿ

              ಬೀಜಿಂಗ್ : ಜಗತ್ತಿನ ಇತರ ಭಾಗಗಳಲ್ಲಿ ಕರೊನಾ ಸೋಂಕು ಇಳಿಮುಖವಾಗುತ್ತಿದ್ದು ಚೀನಾದಲ್ಲಿ ಅದರ ಪ್ರಮಾಣ ಏರಿಕೆಯಾಗುತ್ತಿದೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕರೊನಾ ಸೋಂಕಿಗೆ ಇಬ್ಬರು ಬಲಿಯಾ ಗಿದ್ದು, ಸಾಂಕ್ರಾಮಿಕತೆ ಉಲ್ಬಣದ ಆತಂಕ ಇನ್ನಷ್ಟು ಹೆಚ್ಚಾಗಿದೆ.

              ಒಮಿಕ್ರಾನ್ ಪ್ರಭೇದದಿಂದ ದೇಶದಲ್ಲಿ ಸೋಂಕಿನ ಹಾವಳಿ ಹೆಚ್ಚಾಗಿದ್ದು ಇಬ್ಬರ ಸಾವಿನ ಪ್ರಕರಣ ಕಳವಳ ಮೂಡಿಸಿದೆ. ಚೀನಾದ ಮುಖ್ಯಭೂಮಿಯಲ್ಲಿ 2021ರ ಜನವರಿ ನಂತರ ವರದಿಯಾದ ಮೊದಲ ಸಾವಿನ ಪ್ರಕರಣ ಇದಾಗಿದ್ದು ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 4,638ಕ್ಕೆ ಏರಿದೆ. ದಕ್ಷಿಣ ಕೊರಿಯಾದಲ್ಲಿ ಕೂಡ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಅಲ್ಲಿ ಒಂದೇ ದಿನ ಆರು ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿರುವುದು ಭಾರಿ ಕಳವಳಕ್ಕೆ ಕಾರಣವಾಗಿದೆ. ಈಶಾನ್ಯ ಪ್ರಾಂತ್ಯ ಜಿಲಿನ್​ನಲ್ಲಿ ಈ ಎರಡು ಸಾವುಗಳು ಸಂಭವಿಸಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್​ಎಚ್​ಸಿ) ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಾಂತ್ಯದಲ್ಲೇ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಹಲವು ನಗರಗಳಲ್ಲಿ ಲಾಕ್​ಡೌನ್ ಮತ್ತು ಕಟ್ಟು ನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. 65 ಹಾಗೂ 87 ವರ್ಷದ ಪುರುಷರು ಬಲಿಯಾಗಿದ್ದು ವಯಸ್ಸಲ್ಲದೆ ಇತರ ಆರೋಗ್ಯ ಸಮಸ್ಯೆಗಳನ್ನೂ ಅವರು ಎದುರಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

        ನಾಲ್ಕನೇ ಅಲೆ ಸಂಭವ: ಭಾರತದಲ್ಲಿ ಕರೊನಾ ಮಹಾಮಾರಿಯ ನಾಲ್ಕನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ. ಆದರೆ ಅದು ಇನ್ನೂ ಕಾಲಿಟ್ಟಿಲ್ಲ ಎಂದು ತಜ್ಞರು ಹೇಳಿದ್ದಾರೆ. 2021ರ ಡಿಸೆಂಬರ್​ನಿಂದ ಈ ವರ್ಷದ ಫೆಬ್ರವರಿ ನಡುವಿನ ಮೂರನೇ ಅಲೆಯಿಂದ ಉಂಟಾಗಿರುವ ರೋಗನಿರೋಧಕತೆ (ಇಮ್ಯುನಿಟಿ) ಹಾಗೂ ಬಹುತೇಕ ರಾಜ್ಯಗಳಲ್ಲಿ ಲಸಿಕೆ ಅಭಿಯಾನ ನಡೆದಿರುವುದು ನಾಲ್ಕನೇ ಅಲೆ ಉಂಟಾಗದಿರಲು ಕಾರಣ ಎಂದು ಮಹಾರಾಷ್ಟ್ರದ ಆರೊಗ್ಯ ಸೇವೆಗಳ ಮಾಜಿ ಮಹಾ ನಿರ್ದೇಶಕ ಸುಭಾಷ್ ಸಾಲುಂಕೆ ಅಭಿಪ್ರಾಯ ಪಟ್ಟಿದ್ದಾರೆ.

                ಡಬ್ಲ್ಯುಎಚ್​ಒ ವಿವರಣೆ: ಒಮಿಕ್ರಾನ್ ರೂಪಾಂತರಿಯ ಬಿಎ.2 ಎಂಬ 'ಗುಪ್ತ' ಉಪ-ತಳಿ ಜಗತ್ತಿನ ಹಲವೆಡೆ ಕೋವಿಡ್-19 ಸೋಂಕು ಹೆಚ್ಚಲು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಅಭಿಪ್ರಾಯ ಪಟ್ಟಿದೆ.

            ಹಲವು ದೇಶಗಳಲ್ಲಿ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಕರೊನಾ ಮಹಾಮಾರಿ ಇನ್ನೂ ಕೊನೆ ಗೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.

                                4,051 ಹೊಸ ಕೇಸ್: ಚೀನಾದಲ್ಲಿ ಶನಿವಾರ ಕರೊನ ಸೋಂಕಿನ 4,051 ಹೊಸ ಕೇಸ್​ಗಳು ದೃಢಪಟ್ಟಿವೆ. ಈ ಪೈಕಿ ಅರ್ಧಕ್ಕಿಂತ ಅಧಿಕ ಕೇಸ್​ಗಳು ಜಿಲಿನ್ ಒಂದರಿಂದಲೇ ವರದಿಯಾಗಿವೆ. ಶುಕ್ರವಾರ 4,365 ಪ್ರಕರಣಗಳು ವರದಿಯಾಗಿದ್ದವು.

                  10 ಲಕ್ಷ ಸಕ್ರಿಯ ಪ್ರಕರಣ: ಹಾಂಕಾಂಗ್​ನಲ್ಲಿ ಕೋವಿಡ್-19 ಸೋಂಕು ಅಬ್ಬರಿಸುತ್ತಿದ್ದು ಸೋಂಕಿತರ ಒಟ್ಟು ಸಂಖ್ಯೆ 10 ಲಕ್ಷ ದಾಟಿದೆ. ಶುಕ್ರವಾರ 20,079 ಜನರಲ್ಲಿ ಸೋಂಕು ದೃಢಪಟ್ಟಿದ್ದು ಕರೊನಾ ಸೋಂಕು ತಗಲಿದವರ ಒಟ್ಟು ಸಂಖ್ಯೆ 10,16,944ಕ್ಕೆ ಏರಿದೆ. ಹಾಂಕಾಂಗ್​ನಲ್ಲಿ ಸೋಂಕಿಗೆ ಸುಮಾರು 5,200 ಜನರು ಬಲಿಯಾಗಿದ್ದಾರೆ, ಇದು ಮುಖ್ಯಭೂಮಿ ಚೀನಾದಲ್ಲಿ ಕೋವಿಡ್-19ರಿಂದ ಮೃತಪಟ್ಟವರಿಗಿಂತಲೂ ಹೆಚ್ಚಾಗಿದೆ. ಚೀನಾದಲ್ಲಿ 4,636 ಮಂದಿ ಮರಣ ಹೊಂದಿದ್ದಾರೆ. ಚೀನಾದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1,26,234 ಆಗಿದೆ. ಸುಮಾರು 74 ಲಕ್ಷ ಜನಸಂಖ್ಯೆಯ ಹಾಂಕಾಂಗ್ ಒಮಿಕ್ರಾನ್ ಪ್ರಭೇದದಿಂದ ತತ್ತರಿಸುತ್ತಿದೆ. ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿದ್ದು ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡಕ್ಕೆ ಒಳಗಾಗಿದೆ.

              ನಾಲ್ಕನೇ ಅಲೆ ಸಂಭವ: ಭಾರತದಲ್ಲಿ ಕರೊನಾ ಮಹಾಮಾರಿಯ ನಾಲ್ಕನೇ ಅಲೆ ಅಪ್ಪಳಿಸುವ ಸಾಧ್ಯತೆಯಿದೆ. ಆದರೆ ಅದು ಇನ್ನೂ ಕಾಲಿಟ್ಟಿಲ್ಲ ಎಂದು ತಜ್ಞರು ಹೇಳಿದ್ದಾರೆ. 2021ರ ಡಿಸೆಂಬರ್​ನಿಂದ ಈ ವರ್ಷದ ಫೆಬ್ರವರಿ ನಡುವಿನ ಮೂರನೇ ಅಲೆಯಿಂದ ಉಂಟಾಗಿರುವ ರೋಗನಿರೋಧಕತೆ (ಇಮ್ಯುನಿಟಿ) ಹಾಗೂ ಬಹುತೇಕ ರಾಜ್ಯಗಳಲ್ಲಿ ಲಸಿಕೆ ಅಭಿಯಾನ ನಡೆದಿರುವುದು ನಾಲ್ಕನೇ ಅಲೆ ಉಂಟಾಗದಿರಲು ಕಾರಣ ಎಂದು ಮಹಾರಾಷ್ಟ್ರದ ಆರೊಗ್ಯ ಸೇವೆಗಳ ಮಾಜಿ ಮಹಾ ನಿರ್ದೇಶಕ ಸುಭಾಷ್ ಸಾಲುಂಕೆ ಅಭಿಪ್ರಾಯ ಪಟ್ಟಿದ್ದಾರೆ.

                           | ಮಾರ್ಗರೆಟ್ ಹ್ಯಾರಿಸ್ ಡಬ್ಲ್ಯುಎಚ್​ಒ ವಕ್ತಾರೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries