ಮಲಪ್ಪುರಂ: ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಐಎಸ್ ಭಯೋತ್ಪಾದಕ ನಜೀಬ್ ಅಲ್-ಹಿಂದಿ ಮಲಪ್ಪುರಂ ಮೂಲದವನು ಎಂದು ಹೇಳಲಾಗುತ್ತಿದೆ. ಐದು ವರ್ಷಗಳ ಹಿಂದೆ ಮಲಪ್ಪುರಂ ಜಿಲ್ಲೆಯ ಪೊನ್ಮಲಾದಿಂದ ನಾಪತ್ತೆಯಾಗಿದ್ದ ನಜೀಬ್ ಎಂಟೆಕ್ ವಿದ್ಯಾರ್ಥಿ ಎಂದು ಶಂಕಿಸಲಾಗಿದೆ. ಐಎಸ್ ಪತ್ರಿಕೆ ಬಿಡುಗಡೆ ಮಾಡಿರುವ ಫೋಟೋ ನಾಪತ್ತೆಯಾಗಿರುವ ನಜೀಬ್ ನದ್ದು ಎಂಬುದು ದೃಢಪಟ್ಟಿದೆ. ಆದರೆ ನಜೀಬ್‌ನನ್ನು ಹತ್ಯೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊನ್ಮಳ ಮೂಲದ ನಜೀಬ್ ನಾಪತ್ತೆಯಾಗಿದ್ದಾರೆ ಎಂದು 2017ರಲ್ಲಿ ಆತನ ತಾಯಿ ಮಲಪ್ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವೆಲ್ಲೂರು ಕಾಲೇಜಿನಲ್ಲಿ ಎಂಟೆಕ್ ಓದುತ್ತಿದ್ದಾಗ ನಾಪತ್ತೆಯಾಗಿದ್ದ. ಕಾಲೇಜಿನಿಂದ ಕಾಣೆಯಾಗಿರುವುದಾಗಿ ದೂರಲಾಗಿತ್ತು. ಆದರೆ, ಆತನ ವಿರುದ್ಧ ಎನ್‌ಐಎ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ ನಂತರ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.