HEALTH TIPS

ಮಾನ್ಸೂನ್ ಪೂರ್ವ ಸ್ವಚ್ಛತೆಗೆ ಸಿದ್ಧತೆ

                 ಕಾಸರಗೋಡು: ಜಿಲ್ಲೆಯಲ್ಲಿ ಮುಂಗಾರು ಕಾಲದ ರೋಗಗಳ ನಿಯಂತ್ರಣಕ್ಕೆ ಮುಂಗಾರು ಪೂರ್ವ ಮುಂಜಾಗ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗುವುದು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಹಾಗೂ ಜಿಲ್ಲಾವಾರು ವಿವಿಧ ನೈರ್ಮಲ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ್ದು,  ವಿಸ್ತೃತ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುವುದು. ಪ್ರತಿ ವಾರ್ಡ್‍ನಲ್ಲಿ 50 ಮನೆಗಳು / ಸಂಸ್ಥೆಗಳನ್ನು ಒಳಗೊಂಡಂತೆ ಕ್ಲಸ್ಟರ್‍ಗಳನ್ನು ರಚಿಸಲಾಗುತ್ತದೆ. ಪ್ರತಿ ಕ್ಲಸ್ಟರ್‍ಗೆ ಅನುಗುಣವಾಗಿ ನೈರ್ಮಲ್ಯ ಸ್ಕ್ವಾಡ್‍ಗಳನ್ನು ರಚಿಸಲಾಗುವುದು ಮತ್ತು ನೈರ್ಮಲ್ಯ ಮ್ಯಾಪಿಂಗ್ ಮತ್ತು ಮೈಕ್ರೋ ಲೆವೆಲ್ ಕ್ರಿಯಾ ಯೋಜನೆಗಳನ್ನು ಯೋಜಿಸಲಾಗುವುದು.

                    ಸ್ವಯಂಸೇವಕರು, ರಾಜಕೀಯ ಪಕ್ಷಗಳು, ಸಾಮಾಜಿಕ ಸಂಸ್ಥೆಗಳು, ಎನ್‍ಜಿಒಗಳು, ಸರ್ಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕುಟುಂಬಶ್ರೀ ಕಾರ್ಯಕರ್ತೆಯರು ಮತ್ತು ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಗಳು, ಕಲೆ ಮತ್ತು ಸಾಂಸ್ಕøತಿಕ ಸಂಸ್ಥೆಗಳು ಮತ್ತು ಇತರ ಎಲ್ಲಾ  ಸಂಸ್ಥೆಗಳನ್ನು ಪ್ರತಿ ವಾರ್ಡ್‍ನಲ್ಲಿ ಸ್ಥಳೀಯ ಸ್ವಯಂಸೇವಕರ ನೇತೃತ್ವದಲ್ಲಿ ಕಾರ್ಯಾಚರಣೆಯ ಪಾಲುದಾರರನ್ನಾಗಿ ಮಾಡಲಾಗುತ್ತದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನೇತೃತ್ವ ವಹಿಸುತ್ತಾರೆ . ವಾರ್ಡ್ ಮಟ್ಟದ ಆರೋಗ್ಯ ಮತ್ತು ಸ್ವಚ್ಛತಾ ಸಮಿತಿಯಲ್ಲಿ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತರನ್ನು ಪುನರ್ ಸಂಘಟಿಸಿ ಅಭಿಯಾನವನ್ನು ತೀವ್ರಗೊಳಿಸಲಾಗುವುದು. ಆರೋಗ್ಯ ಜಾಗೃತಿ ಸಮಿತಿಗಳು ಮತ್ತು ಅಂತರ ವಲಯ ಸಮಿತಿಗಳ ಸಭೆಗಳು ಜಿಲ್ಲಾ, ನಗರಸಭೆಯ ಬ್ಲಾಕ್ ಗ್ರಾಮ ಪಂಚಾಯತ್ ಅಧ್ಯಕ್ಷರು / ಗ್ರಾಮ ಪಂಚಾಯತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮತ್ತು ಆಯಾ ವೈದ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಿಲ್ಲೆಯ ಎಲ್ಲ ಚಟುವಟಿಕೆಗಳನ್ನು ಆಯಾ ಜಿಲ್ಲಾ ಸಚಿವರ ನೇತೃತ್ವದಲ್ಲಿ ಕ್ರೋಡೀಕರಿಸಿ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಸ್ವಚ್ಛತಾ ಮಿಷನ್ ಜಿಲ್ಲಾ ಸಂಯೋಜಕಿ ಎ ಲಕ್ಷ್ಮಿ, ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಎಂ.ಪಿ.ಸುಬ್ರಮಣಿಯನ್, ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ.ರಾಮದಾಸ್ ಮತ್ತಿತರರು ಮಾತನಾಡಿದರು. ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries