ಕಾಸರಗೋಡು: ಮೊಬೈಲ್ ಗೇಮ್ ಆಡುತ್ತಿದ್ದಕ್ಕೆ ತಾಯಿ ಬೈದಿರುವುದನ್ನು ನೆಪವಾಗಿಸಿ 11 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಗಂಭೀರ ಘಟನೆ ನಡೆದಿದೆ. ಕಾಸರಗೋಡು ಮೇಲ್ಪರಂಬದ ಕಟಾಂಗೋಡು ನಿವಾಸಿ ಅಬ್ದುಲ್ ರಹ್ಮಾನ್ ಮತ್ತು ಶಾಹಿನಾ ದಂಪತಿಯ ಪುತ್ರಿ ಫಾತಿಮಾ ಅಮ್ನಾ ಆತ್ಮಹತ್ಯೆ ಮಾಡಿಕೊಂಡವಳು.
ಶಾಲಾ ಪಠ್ಯ ಅಭ್ಯಸಿಸದೆ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ ಮಗುವಿಗೆ ತಾಯಿ ಛೀಮಾರಿ ಹಾಕಿದ್ದರು. ಮೊಬೈಲನ್ನು ಮತ್ತೆ ಬಳಸುತ್ತಿರುವುದನ್ನು ಕಂಡು ಅದನ್ನು ಎಳೆದು ತೆಗೆದಿರಿಸಿದ್ದರು.ಇದರಿಂದ ಹತಾಶೆಗೊಳಗಾದ ಬಾಲಕಿ ಕಿಟಕಿಯ ಸರಳಿಗೆ ಶಾಲು ಹೊದ್ದು ಆತ್ಮಹತ್ಯೆಗ್ಯೆದಳೆಂದು ಹೇಳಲಾಗಿದೆ.