ಉಪ್ಪಳ: ಬೇಕೂರು ಬಳಿಯ ಬೊಳುವಾಯಿ ಗುಳಿಗ ಸಾನಿಧ್ಯ ಮತ್ತು ಗುಳಿಗ ಬನದ ಬ್ರಹ್ಮಕಲಶೋತ್ಸವ ಏಪ್ರಿಲ್ 23 ಮತ್ತು 24 ರಂದು ನಡೆಯಲಿದೆ. ಇದರ
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಮಿತಿಯ ಗೌರವ ಸಲಹೆಗಾರರಾದ ರಾಧಾಕೃಷ್ಣ ಬರ್ಲಾಯ ರವರು ಸಮಿತಿಯ ಅಧ್ಯಕ್ಷ ದಾಮೋದರ ಉಬರಲೇ ಇವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಉದ್ಘಾಟಿಸಿ, ಮುಂದಿನ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು. ಗೌರವ ಸಲಹೆಗಾರ ತಿಮ್ಮಪ್ಪ ಭಂಡಾರಿ ಬೊಳುವಾಯಿ, ಜೊತೆ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬೊಳ್ಳಾರು, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಜಯಂತಿ ಭಂಡಾರಿ ಬೊಳುವಾಯಿ, ಸಮಿತಿ ಸಂಚಾಲಕ ಕಿರಣ್ ರೈ ಬೊಳುವಾಯಿ, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಬಾಬು ಪೂಜಾರಿ ಬೇಕೂರು, ರಾಮಣ್ಣ ಆಚಾರ್ಯ ಬೇಕೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾಲಕ ಪ್ರಸಾದ್ ಶೆಟ್ಟಿ ಮಾಣಿಬೆಟ್ಟು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ವಂದಿಸಿದರು.