ಕೊಚ್ಚಿ: ರಾಷ್ಟ್ರೀಯ ಮುಷ್ಕರದ ಸಂದರ್ಭದಲ್ಲಿ ಎಡಪಂಥೀಯ ಟ್ರೇಡ್ ಯೂನಿಯನ್‍ಗಳ ಬೂಟಾಟಿಕೆಯನ್ನು ಹಿರಿಯ ಪತ್ರಕರ್ತ ಮ್ಯಾಥ್ಯೂ ಸ್ಯಾಮ್ಯುಯೆಲ್ ಟೀಕಿಸಿದ್ದಾರೆ. ಕೇರಳದಲ್ಲಿ ಧರಣಿ ನಿರತರು ಅಂದು ಮಾತ್ರ ಕೆಲಸ ಮಾಡುತ್ತಾರೆ. ದುಡಿಯದೇ ಕೂಲಿ ಪಡೆಯುವವರು ಇವರು. ಈ ಜನರು ಕೆಲಸ ಮಾಡುವ ದಿನಗಳು ಕೆಲವಚ್ಟೇ ದಿನ ಮಾತ್ರ. ಅವರು ಮುಷ್ಕರ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ. ಅವರು ವಾಹನಗಳ ಚಕ್ರದ ಗಾಳಿ ವಿಚ್ಚೇದಿಸುತ್ತಾರೆ. ಪ್ರಯಾಣಿಕರು ಮತ್ತು ಚಾಲಕರಿಗೆ ಕಿರುಕುಳ ನೀಡುತ್ತಾರೆ ಮತ್ತು ಅಶ್ಲೀಲ ಭಾಷೆಯನ್ನು ಬಳಸುತ್ತಾರೆ. ಮುಷ್ಕರದ ನೆಪದಲ್ಲಿ ಇಂತಹ ಕಳವಳಕಾರಿ ಘಟನೆಗಳು ನಡೆಯುತ್ತಿರುವುಉದ ಖೇದಕರ.
ಕಾರ್ಮಿಕ ಸಂಘಟನೆಗಳು ಯಾರನ್ನು ಸೋಲಿಸಲು ಪ್ರಯತ್ನಿಸುತ್ತಿವೆ? ಹರತಾಳದಿಂದ ಏನು ಸಾಧಿಸಲಾಯಿತು. ದಿನನಿತ್ಯ ನಿರಂತರವಾಗಿ ದುಡಿಯುವವರಿಗೆ ಕಿರುಕುಳ ನೀಡುತ್ತಿದ್ದಾರೆ. ಕೇರಳ ತನ್ನ ದೈನಂದಿನ ವೆಚ್ಚವನ್ನು ಸರಿದೂಗಿಸಲು 150 ಕೋಟಿ ರೂ.ಗಳ ಸಾಲವನ್ನು ಪಡೆಯುತ್ತಿದೆ. ಕೇರಳಕ್ಕೆ ದಿನಕ್ಕೆ 1700 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮುಷ್ಕರದಿಂದ ಕೆಲಸ ಮಾಡದ ಸರ್ಕಾರಿ ನೌಕರರಿಗೆ ವೇತನ ನೀಡಲು ರಾಜ್ಯ ಸರ್ಕಾರ ಸಾಲ ಮಾಡುತ್ತಿದೆ. ಕೋವಿಡ್‍ನಿಂದ ಛಿದ್ರಗೊಂಡ ಆರ್ಥಿಕತೆಯಿಂದ ಕೇರಳೀಯರು ಚೇತರಿಸಿಕೊಂಡಿಲ್ಲ. ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಬ್ಯಾಂಕ್ ಸಾಲವನ್ನೂ ತೀರಿಸಲಾಗದೆ ಜಪ್ತಿ ಭೀತಿ ಎದುರಿಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಮುಷ್ಕರವಿಲ್ಲ. ಅಲ್ಲಿ ಜನಜೀವನ ಸಹಜವಾಗಿದೆ ಎಂದರು.
ಉತ್ತರ ಭಾರತೀಯ ಕಾರ್ಮಿಕರನ್ನು ಕಳಪೆ ಮುಖಬೆಲೆಗೆ ಕೊಂಡುಕೊಳ್ಳುತ್ತಾರೆ. ಅವರಿಗೆ ಮುಷ್ಕರ, ಹರತಾಳ ಬಗ್ಗೆ ಗೊತ್ತಿರಲಿಲ್ಲ. ಇತರ ರಾಜ್ಯಗಳು ಸಿಪಿಎಂ ಮತ್ತು ಸಿಐಟಿಯುವನ್ನು ನಿರ್ಲಕ್ಷಿಸುತ್ತವೆ. ಬೆಂಗಾಲಿಗಳ ಬೆನ್ನಟ್ಟಿದ ಹಾಗೆ ಮಲೆಯಾಳಿಗಳು ಅವರನ್ನು ಥಳಿಸುವ ಕಾಲ ದೂರವಿಲ್ಲ. ಮುಷ್ಕರದಿಂದ ಜನರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸಚಿವ ಶಿವಂಕುಟ್ಟಿ ಹೇಳಿದ್ದಕ್ಕೆ ಉತ್ತರವೂ ಇದಾಗಿದೆ.
ಕೇರಳೀಯರ ಬದುಕಿನ ದಾರಿಯನ್ನು ಬಡಿದೆಬ್ಬಿಸಿದ್ದು, ಕಾರ್ಮಿಕ ಮುಖಂಡರ ಬಳಿ ಹಣವಿದೆ. ಟ್ರೇಡ್ ಯೂನಿಯನ್ ನಾಯಕರು ನೆರವಿನಿಂದ ಬದುಕುತ್ತಾರೆ. ಕೇರಳ ಈಗ ಕೊಳಕು ರಾಜಕೀಯ ಸಂಸ್ಕøತಿಯನ್ನು ಹೊಂದಿದೆ. ಅದು ಬದಲಾಗಬೇಕು. ಸ್ಥಳೀಯರು ಬಂದ್‍ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕೊಳಕು ನೋಡಿ ಜನ ಬೇಸತ್ತಿದ್ದಾರೆ. ಕೇರಳದಲ್ಲಿ ಎಲ್ಲಾ ಸಾರ್ವಜನಿಕ ವಲಯದ ಉದ್ದಿಮೆಗಳು ನಷ್ಟದಲ್ಲಿವೆ. ಕೆಎಸ್‍ಆರ್‍ಟಿಸಿ ಮತ್ತು ಬೆವರೇಜಸ್ ಕಾಪೆರ್Çರೇಷನ್ ನಷ್ಟಕ್ಕೆ ಕಾರಣವಾಗಿವೆ. ಖಾಸಗೀಕರಣವನ್ನು ವಿರೋಧಿಸುವವರು ಅವರೇ. ಇತರ ರಾಜ್ಯಗಳು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ್ದರೆ, ಕೇರಳ ಮಾತ್ರ ಹಾಗೆ ಮಾಡಿಲ್ಲ ಎಂದು ಹೇಳಿದರು.