ಕಾಸರಗೋಡು: ಸರ್ಕಾರಿ ಕಾಲೇಜು ಪ್ರಾಧ್ಯಾಪಕ ಪ್ರೊ. ಪಿ. ಸುಬ್ರಾಯ ಭಟ್ ನೂರನೆಯ ಜನ್ಮದಿನದ ಅಂಗವಾಗಿ 'ಪೆÇ್ರ. ಪಿ. ಸುಬ್ರಾಯ ಭಟ್ - ನೂರರ ನೆನಪು' ಕಾರ್ಯಕ್ರಮ ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗ ಸಭಾಂಗಣದಲ್ಲಿ ಜರುಗಿತು. ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನ ಪ್ರಭಾರ ಪ್ರಾಂಶುಪಾಲ ಡಾ. ಎ. ಎಲ್ .ಅನಂತಪದ್ಮನಾಭ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸುಬ್ರಾಯ ಭಟ್ ಅವರ ಜನ್ಮಶತಮಾನೋತ್ಸವವು ವರ್ಷಪೂರ್ತಿ ಸಂಭ್ರಮದಿಂದ ನಡೆಯುವುದರ ಜತೆಗೆ ಅವರ ಸಾಧನೆಗಳ ದಾಖಲಿಕರಣ ನಡೆಯಬೇಕು ಎಂದು ತಿಳಿಸಿದರು.
ಮಧುರೈ ಕಾಮರಾಜ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಅವರು ಮಾತನಾಡಿ, "ಪೆÇ್ರ.ಪಿ.ಸುಬ್ರಾಯ ಭಟ್ ಅವರು ಕಾಸರಗೋಡಿನ ಪಂಡಿತ ಪರಂಪರೆಯ ವಿದ್ವಾಂಸರಲ್ಲಿ ಒಬ್ಬರಾಗಿದ್ದು, ಹಳೆಗನ್ನಡ, ಸಂಸ್ಕøತ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ ಪಡೆದಿದ್ದರು. ಪಂಪ, ರನ್ನ, ಹರಿಹರ, ರಾಘವಾಂಕ ಮುಂತಾದವರ ಕಾವ್ಯಗಳನ್ನು, ಕಾವ್ಯ ಮೀಮಾಂಸೆಗಳಂತಹ ವಿಷಯಗಳನ್ನು ಅರ್ಥಪೂರ್ಣವಾಗಿ ವಿವರಿಸುವ ಅವರ ಚಾಕಚಕ್ಯತೆಯನ್ನು ಕಂಡು ಕನ್ನಡೇತರರೂ ಅವರ ಪಾಠ ಕೇಳಲು ಆಸಕ್ತರಾಗುತ್ತಿದ್ದರು ಎಂದು ತಿಳಿಸಿದರು. ಪೆÇ್ರ. ಪಿ. ಸುಬ್ರಾಯ ಭಟ್ ಅವರ ಪುತ್ರ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಬಿ.ಎ ಕನ್ನಡ ತೃತೀಯ ಪದವಿ ವಿದ್ಯಾರ್ಥಿನಿ ಧನ್ಯಶ್ರೀ ಪೆÇ್ರ.ಪಿ.ಸುಬ್ರಾಯ ಭಟ್ ಅವರ ಬದುಕು ಬರಹಗಳ ಪರಿಚಯ ಮಾಡಿದರು.
ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ರತ್ನಾಕರ ಮಲ್ಲಮೂಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗ ಇಂದು ಸ್ನಾತಕೋತ್ತರ ಅಧ್ಯಯನ ಕೇಂದ್ರವಾಗಿ ಸಂಶೋಧನ ವಿಭಾಗವಾಗಿ ಬೆಳೆಯುವುದರ ಮೂಲಕ ಕಾಸರಗೋಡಿನ ಕನ್ನಡಕ್ಕೆ ಹಲವು ರೀತಿಯಲ್ಲಿ ಶಕ್ತಿ ನೀಡಿದೆ ಎಂದು ತಿಳಿಸಿದರು. ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಸ್ವಾಗತಿಸಿದರು. ಡಾ. ಬಾಲಕೃಷ್ಣ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕುಮಾರಿ ಜ್ಯೋತಿಕ, ದೀಪ್ತಿ ಪ್ರಾರ್ಥನೆ ಹಾಡಿದರು.