HEALTH TIPS

ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ಧನ: ಕೇಂದ್ರದ ಗಡುವು ಸಾಲದು ಎಂದ ಸುಪ್ರೀಂ

            ನವದೆಹಲಿ: ಕೋವಿಡ್‌ 19ನಿಂದ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ಮೊತ್ತ ಪಡೆಯಲು ಕೇಂದ್ರ ಸರ್ಕಾರ ನೀಡಿರುವ ನಾಲ್ಕು ವಾರಗಳ ಗಡುವು ಸಾಕಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

             ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಬಿ.ವಿ. ನಾಗರತ್ನಾ ಅವರಿದ್ದ ಪೀಠವು, ಎಕ್ಸ್ ಗ್ರೇಷಿಯಾ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹ ವ್ಯಕ್ತಿಗಳಿಗೆ ನಿರ್ದಿಷ್ಟ ದಿನಾಂಕದಿಂದ 60 ದಿನಗಳ ಅವಧಿ ನೀಡಲಾಗುತ್ತದೆ.

              ಸಂಬಂಧಿಸಿದವರ ವಾರಸುದಾರರಿಗೆ ಎಕ್ಸ್ ಗ್ರೇಷಿಯಾ ಪಡೆಯಲು 90 ದಿನಗಳನ್ನು ನೀಡಲಾಗುತ್ತದೆ. ಹೀಗಿರುವಾಗ ಮೊದಲೇ ಕುಟುಂಬ ಸದಸ್ಯರನ್ನು ಕಳೆದುಕೊಂಡು ದುಃಖಿತರಾದವರಿಗೆ ಇಷ್ಟು ಕಡಿಮೆ ಅವಧಿಯ ಗಡುವು ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

'ಇದು (ನಾಲ್ಕು ವಾರಗಳು) ಸೂಕ್ತ ಗಡುವು ಎನಿಸುವುದಿಲ್ಲ. ಏಕೆಂದರೆ ಪರಿಹಾರಕ್ಕೆ ಅರ್ಹವಾದ ಕುಟುಂಬವು ಮೊದಲೇ ಆಘಾತದಲ್ಲಿರುತ್ತದೆ. ಕುಟುಂಬದಲ್ಲಿ ಸಾವು ಸಂಭವಿಸಿದಾಗ ಆ ಕುಟುಂಬವು ದುಃಖದಿಂದ ಚೇತರಿಸಿಕೊಳ್ಳಲು, ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ' ಎಂದು ಪೀಠ ಹೇಳಿತು.

            ಎಕ್ಸ್-ಗ್ರೇಷಿಯಾ ಪಡೆಯಲು ಕೋವಿಡ್ 19ರ ಮರಣದ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದರೆ, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವಿಪತ್ತು ನಿರ್ವಹಣಾ ಕಾಯಿದೆ 2005ರ ಅಡಿ ಅಧಿಕಾರವಿದೆ. ಅದನ್ನು ಚಲಾಯಿಸಿ ಎಂದು ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿತು.

            ನಕಲಿ ಪ್ರಮಾಣ ಪತ್ರ ಸಲ್ಲಿಸಿ ಪರಿಹಾರ ಪಡೆದಿರುವ ಬಗ್ಗೆ ಮಾದರಿ ಸಮೀಕ್ಷೆ ನಡೆಸಲು ಕೋರಿ ಸಲ್ಲಿಸಿರುವ ಕೇಂದ್ರ ಸರ್ಕಾರದ ಅರ್ಜಿಯನ್ನು ಆಲಿಸಿದ ನ್ಯಾಯ ಪೀಠ, ನೋಂದಣಿಯಾದ ಸಾವಿನ ಸಂಖ್ಯೆ ಮತ್ತು ಪರಿಹಾರ ಪಡೆದುಕೊಂಡಿರುವ ಅಂಕಿಅಂಶದಲ್ಲಿ ವ್ಯತ್ಯಾಸವಿರುವ ಎರಡು ಅಥವಾ ಮೂರು ರಾಜ್ಯಗಳನ್ನು ಕೇಂದ್ರೀಕರಿಸಿ ಮಾದರಿ ಸಮೀಕ್ಷೆ ನಡೆಸಬಹುದು ಎಂದು ಹೇಳಿದೆ.

ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೋವಿಡ್-19ರಿಂದ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ಮೊತ್ತ (ಎಕ್ಸ್ ಗ್ರೇಷಿಯಾ) ವಿತರಣೆ ಅವಧಿಯನ್ನು ಸುಖಾಸುಮ್ಮನೆ ವಿಸ್ತರಿಸುವುದು ಅಪೇಕ್ಷಣೀಯವಲ್ಲ. ನಾಲ್ಕು ವಾರಗಳ ಗಡುವು ನಿಗದಿಪಡಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು.

           ನಕಲಿ ಪ್ರಮಾಣ ಪತ್ರ ಸಲ್ಲಿಸಿ ಪರಿಹಾರ ಪಡೆಯುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ, ಕೇರಳದ ಪರವಾಗಿ ಹಾಜರಾದ ಹಿರಿಯ ವಕೀಲ ಆರ್.ಬಸಂತ್, ಈ ವಿಷಯವನ್ನು ರಾಜ್ಯ ಪೊಲೀಸರಿಗೆ ವಹಿಸಬಾರದು. ಇದರ ಪರಿಶೀಲನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವಹಿಸಬೇಕು ಎಂದು ಮನವಿ ಮಾಡಿದರು.

             ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಾರ್ಚ್ 23ರಂದು ನಿರ್ದೇಶನ ನೀಡುವುದಾಗಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries