ಕಾಸರಗೋಡು: ಸ್ವಂತ ಮನೆ ಅಥವಾ ಜಾಗ ಹೊಂದಿರದವರಿಗಾಗಿ ರಾಜ್ಯ ಸರ್ಕಾರದ ಲೈಫ್ ಯೋಜನೆಗೊಳಪಡಿಸಿ ಚೆಮ್ನಾಡ್ ಪಂಚಾಯಿತಿಯ ಬೆಂಡಿಚ್ಚಾಲ್ ನಿಜಾಮುದ್ದೀನ್ ನಗರದಲ್ಲಿ ನಿರ್ಮಾಣಗೊಳ್ಳಲಿರುವ ವಸತಿಸಮುಚ್ಛಯ ಸನಿಹ ಚಿಲ್ಡ್ರನ್ಸ್ ಪಾರ್ಕಿನ ನಿರ್ಮಾಣಕಾಮಗಾರಿಗೆ ಗ್ರಾಪಂ ಅಧ್ಯಕ್ಷೆ ಸುಬೈದಾ ಅಬೂಬಕ್ಕರ್ ಚಾಲನೆ ನೀಡಿದರು.
ಪಂಚಾಯಿತಿಯ ವಾರ್ಷಿಕ ಯೋಜನೆಯಲ್ಲಿ ಒಳಪಡಿಸಿ ಚಿಲ್ಡ್ರನ್ಸ್ ಪಾರ್ಕ್ ನಿರ್ಮಾಣಗೊಳ್ಳಲಿದೆ. ಆರಂಭಿಕ ಹಂತದಲ್ಲಿ ಮಕ್ಕಳಿಗೆ ಆಟವಾಡುವ ನಿಟ್ಟಿನಲ್ಲಿ ಮಕ್ಕಳ ಆಟಿಕೆ ಉಪಕರಣಗಳ ಖರೀದಿಗೆ 35ಲಕ್ಷ ರೂ.ಮೀಸಲಿರಿಸಿದೆ. ಮುಂದೆ ಪಾರ್ಕನ್ನು ಅಭಿವೃದ್ಧಿಪಡಿಸುವುದರ ಜತೆಗೆ ಟೂರಿಸಂ ವಲಯದಲ್ಲಿ ಪಂಚಾಯಿತಿಯ ಹೆಜ್ಜೆಗುರುತು ಸ್ಥಾಪಿಸಲಾಗುವುದು ಎಂದು ಅಧ್ಯಕ್ಷೆ ಸುಬೈದಾ ಅಬೂಬಕ್ಕರ್ ತಿಳಿಸಿದ್ದಾರೆ.
ಉಪಾಧ್ಯಕ್ಷ ಇಬ್ರಾಹಿಂ ಮನ್ಸೂರ್ ಕುರಿಕ್ಕಲ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಆಯಿಶಾ ಕೆ.ಎ, ಶಂಸುದ್ದೀನ್ ತೆಕ್ಕಿಲ್. ರಮಾ ಗಂಗಾಧರನ್, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.