HEALTH TIPS

ಜಾಲತಾಣದಲ್ಲಿ ಭಾರಿ ವೈರಲ್​ ಆಗ್ತಿದೆ ವೈದ್ಯಕೀಯ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗದ ರಿಜಿಸ್ಟ್ರಾರ್‌ ಸಹಿ!

          ಗುವಾಹಟಿ: ಕೆಲವರ ಅಂದ ಚೆಂದದ ಬರವಣಿಗೆಗಳು ವೈರಲ್​ ಆಗುವುದು ಇದೆ. ಆದರೆ ಯಾರದ್ದಾದರೂ ಸಹಿ ವೈರಲ್​ ಆಗಿರುವುದನ್ನು ನೋಡಿದ್ದೀರಾ?

        ಅಂಥದ್ದೊಂದು ಅಚ್ಚರಿಯೂ ನಡೆದಿದೆ. ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿ ಸಹಿ ವೈರಲ್ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.

          ನೆಟ್ಟಿಗರೊಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಅದು ಸಕತ್​ ವೈರಲ್​ ಆಗಿದೆ.

           ಗುವಾಹಟಿಯ ವೈದ್ಯಕೀಯ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗದ ರಿಜಿಸ್ಟ್ರಾರ್‌ ಸಹಿ ಇದಾಗಿದೆ. ಅಷ್ಟಕ್ಕೂ ಈ ಸಹಿ ಇಷ್ಟೆಲ್ಲಾ ವೈರಲ್​ ಆಗಲು ಕಾರಣ, ಈ ಸಹಿ ಮುಳ್ಳುಹಂದಿಯಂತೆ ಕಾಣುತ್ತಿದೆ ಎಂದು. ಈ ಸಹಿಯ ಜತೆಗೆ ಮುಳ್ಳುಹಂದಿಯ ಫೋಟೋ ಕೂಡ ಜಾಲತಾಣದಲ್ಲಿ ಸಕತ್​ ಸುದ್ದಿ ಮಾಡುತ್ತಿದೆ.

             ಈ ಫೋಟೋವನ್ನು ನಾನು ತೆಗೆದಿದ್ದೇನೆ. ನಾನು ಇಲ್ಲಿಯವರೆಗೆ ವಿಶಿಷ್ಟ ಸಹಿಗಳನ್ನು ನೋಡಿದ್ದೇನೆ. ಆದರೆ ಇದೇ ಬೆಸ್ಟ್ ಸಿಗ್ನೇಚರ್ ಆಗಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಸಹಿಯ ಕೆಳಗೆ 2022 ಮಾರ್ಚ್ 4 ಎನ್ನುವ ದಿನಾಂಕ ಇರುವುದನ್ನು ನೋಡ ಬಹುದಾಗಿದೆ.

ಈ ಸಹಿಯನ್ನ ಕಂಡ ನೆಟ್ಟಿಗರು ವಿವಿಧ ರೀತಿಯ ಕಾಮೆಂಟುಗಳನ್ನ ಮಾಡುತ್ತಿದ್ದಾರೆ. ಇಬ್ಬ ಬಳಕೆದಾರ, ಇದು ಥೇಟ್ ಮುಳ್ಳುಹಂದಿಯಂತೆ ಕಾಣುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries