ತಿರುವನಂತಪುರ; ಕೆ ರೈಲ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗಾಗಿ ಮಕ್ಕಳ ಹಕ್ಕುಗಳ ಆಯೋಗವು ಪ್ರಕರಣವನ್ನು ದಾಖಲಿಸಿದೆ. ಪ್ರತಿಭಟನೆ ಹೆಸರಲ್ಲಿ ಮಕ್ಕಳನ್ನು ಪಾಲ್ಗೊಳಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದ್ದು, ತೀವ್ರ ಕಳವಳ ಸೃಷ್ಟಿಸಿದೆ ಎಮದು ಆಯೋಗ ಗಮನಿಸಿದೆ.
ಕೆ.ರೈಲು ಹಾಗೂ ಟ್ರಾಫಿಕ್ ಪಾಯಿಂಟ್ ಗಳಲ್ಲಿ ಮಕಳನ್ನು ಬಳಸಿ ಮಾಡುವ ಪ್ರತಿಭಟನೆುಯಿಂದ ಆಗುವ ಅನಾಹುತಗಳ ಕುರಿತು ಅಧ್ಯಕ್ಷ ಕೆ.ವಿ.ಮನೋಜಕುಮಾರ್ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ತನಿಖೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರು ಮತ್ತು ಕೊಟ್ಟಾಯಂ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಆಯೋಗ ಸೂಚಿಸಿದೆ. ಕೆ ರೈಲ್ ಪ್ರತಿಭಟನೆಗೆ ಸಂಬಂಧಿಸಿದಂತೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಪೊಲೀಸರು ತೀವ್ರ ತೊಂದರೆಗಳನ್ನು ನೀಡುತ್ತಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ ಮಕ್ಕಳ ಹಕ್ಕು ಆಯೋಗ ಕ್ರಮಕ್ಕೆ ಮುಂದಾಯಿತು. ಮಕ್ಕಳ ಹಕ್ಕುಗಳ ಆಯೋಗದ ಹೊಸ ಕ್ರಮವು ಮಕ್ಕಳನ್ನು ಹೋರಾಟದಿಂದ ಹೊರಗಿಡಲು ಪ್ರತಿಭಟನಾಕಾರರನ್ನು ಒತ್ತಾಯಿಸುತ್ತದೆ.