ಮೀರತ್: ಸಹರಣಪುರ-ದಿಲ್ಲಿ ಪ್ಯಾಸೆಂಜರ್ ರೈಲಿನ ಇಂಜಿನ್ ಮತ್ತು ಎರಡು ಬೋಗಿಗಳಿಗೆ ಇಂದು ಮೀರತ್‍ನ ದೌರಾಲ ನಿಲ್ದಾಣದಲ್ಲಿ ಬೆಂಕಿ ಹತ್ತಿಕೊಂಡಾಗ ಪ್ರಯಾಣಿಕರು ಈ ಇಂಜಿನ್ ಮತ್ತು ಎರಡು ಬೋಗಿಗಳನ್ನು ರೈಲಿನ ಇತರ ಬೋಗಿಗಳಿಂದ ಪ್ರತ್ಯೇಕಿಸಲು ರೈಲನ್ನು ಒಟ್ಟಾಗಿ ದೂಡಿದ್ದಾರೆ.

ರೈಲು ನಿಲ್ದಾಣ ಸಿಬ್ಬಂದಿಯೊಂದಿಗೆ ಹಲವಾರು ಪ್ರಯಾಣಿಕರು ರೈಲಿನ ಬೋಗಿಗಳನ್ನು ಪ್ರತ್ಯೇಕಿಸಲು ದೂಡುತ್ತಿರುವುದು ಹಾಗೂ ಬೆಂಕಿ ಇನ್ನಷ್ಟು ಬೋಗಿಗಳಿಗೆ ಹರಡದಂತೆ ಪ್ರಯತ್ನಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.
ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಘಟನೆಯಿಂದಾಗಿ ರೈಲು ಸೇವೆಗಳಲ್ಲಿ ಸ್ವಲ್ಪ ಕಾಲ ವ್ಯತ್ಯಯವುಂಟಾಯಿತು. ಬೆಂಕಿಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.