ನವದೆಹಲಿ: ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ನವದೆಹಲಿಗೆ ಆಗಮಿಸಿದ್ದಾರೆ. ವಾಂಗ್ ಯೀ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದಾರೆ.
ಇದಕ್ಕೂ ಮುನ್ನ ಕಾಬೂಲ್ ಹಾಗೂ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. 2020 ರ ಮೇ ತಿಂಗಳಿನ ಬಳಿಕ ಉಭಯ ದೇಶಗಳ ನಡುವಿನ ಗಡಿ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಚೀನಾದ ಹಿರಿಯ ನಾಯಕ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಈಶಾನ್ಯ ಲಡಾಖ್ ನಲ್ಲಿ (ಎಲ್ಎಸಿ) ಭಾರತ ಹಾಗೂ ಚೀನಾ ಸೇನಾ ಪಡೆಗಳು ಸೇನಾಪಡೆಗಳನ್ನು ಹಿಂಪಡೆದಿದ್ದು, ಉಳಿದ ಸಂಘರ್ಷವಿರುವ ಪ್ರದೇಶಗಳಲ್ಲಿ ಸೇನಾ ಹಿಂತೆಗೆತದ ಬಗ್ಗೆ ಮಾತುಕತೆ ನಡೆಯುತ್ತಿದೆ.
ಒಐಸಿ (ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಸಹಕಾರ) ಸಭೆಯಲ್ಲಿ ಚೀನಾ ಸಚಿವರು ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಭಾರತ ವಿರೋಧಿಸಿತ್ತು. ಈ ಬೆನ್ನಲ್ಲೇ ಚೀನಾ ಸಚಿವರು ಭಾರತಕ್ಕೆ ಆಗಮಿಸುತ್ತಿದ್ದಾರೆ.