ಪಾಲಕ್ಕಾಡ್: ಸಾರಿಗೆ ಸಚಿವ ಆಂಟನಿ ರಾಜು ವಿರುದ್ಧ ಬಸ್ ಮಾಲೀಕರು ಕಿಡಿಕಾರಿದ್ದಾರೆ. ಸಚಿವರು ಹೇಳಿದ್ದನ್ನು ಪಾಲಿಸಿಲ್ಲ ಎಂದು ಖಾಸಗಿ ಬಸ್ ಮಾಲೀಕರು ಆರೋಪಿಸಿದ್ದಾರೆ. ಪ್ರಯಾಣ ದರ ಹೆಚ್ಚಿಸದೆ ಅನಿರ್ದಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಬಸ್ ಮಾಲೀಕರು ತಿಳಿಸಿದ್ದಾರೆ.
ಮುಷ್ಕರ ಮೂರನೇ ದಿನ ಪೂರ್ಣಗೊಂಡು ನಾಲ್ಕನೇ ದಿನಕ್ಕೆ ಕಾಲಿರಿಸುತ್ತಿದ್ದರೂ ಸರ್ಕಾರ ಇನ್ನೂ ಮಾತುಕತೆಗೆ ಕರೆದಿಲ್ಲ ಎಂದು ಬಸ್ ಮಾಲೀಕರ ಸಂಘ ತಿಳಿಸಿದೆ. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ನೀಡಲು ಸರ್ಕಾರ ಸಿದ್ಧವಾಗಿದೆಯೇ ಎಂದು ಪ್ರಶ್ನಿಸಿದ ಸಂಘಟನೆ, ಪರೀಕ್ಷೆಯ ಸಮಯದಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ ಎಂದು ಹೇಳಿದೆ.
ಸಾರಿಗೆ ಸಚಿವ ಆಂಟನಿ ರಾಜು ಅವರು ನೀಡಿದ ಭರವಸೆ ಪೂರೈಸದ ಕಾರಣ ಮುಷ್ಕರ ನಡೆಸಲಾಗಿದೆ. ಎಲ್ ಡಿಎಫ್ ದರ ಏರಿಕೆ ನಿರ್ಧಾರವನ್ನು ಸಚಿವರು ಇನ್ನೂ ಪಾಲಿಸಿಲ್ಲ ಎಂದು ಬಸ್ ಮಾಲೀಕರು ಆರೋಪಿಸಿದ್ದಾರೆ.
ಕೊರೋನಾ ಕಾಲದ ವಾಹನ ತೆರಿಗೆಗೆ ವಿನಾಯ್ತಿ ನೀಡುವ ಅಗತ್ಯತೆ ಹಾಗೂ ಕನಿಷ್ಠ ಶುಲ್ಕ ಹೆಚ್ಚಳ ಮತ್ತು ವಿದ್ಯಾರ್ಥಿಗಳ ರಿಯಾಯಿತಿ ದರಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಖಾಸಗಿ ಬಸ್ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ.