HEALTH TIPS

ಪತ್ರಿಕೋದ್ಯಮ ಬದಲಾಗಬೇಕು; ಶಾಸಕ ಇ ಚಂದ್ರಶೇಖರನ್: ಕಿಲಾ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅಭಿಮತ

  

           ಕಾಸರಗೋಡು: ಸಮಾಜ  ಪತ್ರಿಕೋದ್ಯಮವನ್ನು ಅತ್ಯಂತ ಭರವಸೆಯಿಂದ ನೋಡುತ್ತಿದ್ದು, ಸಮಾಜಕ್ಕೆ ಸತ್ಯವನ್ನು ತೆರೆದಿಡುವುದು ಪತ್ರಕರ್ತನ ಕರ್ತವ್ಯವಾಗಿದೆ ಎಂದು ಉದುಮ ಶಾಸಕ ಇ.ಚಂದ್ರಶೇಖರನ್ ತಿಳಿಸಿದರು.

                  ಕೇರಳ ಕಾರ್ಮಿಕ ಮತ್ತು ಉದ್ಯೋಗ ಸಂಸ್ಥೆ (ಕಿಲಾ) ಮತ್ತು ಕೇರಳ ರಿಪೋಟರ್|ರ್ಸ್ ಆಂಡ್ ಮೀಡಿಯಾ ಪರ್ಸನ್ಸ್ ಯೂನಿಯನ್  ಸಹಯೋಗದಲ್ಲಿ ಕಾಞಂಗಾಡ್‍ನಲ್ಲಿ ಆಯೋಜಿಸಲಾದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

       ಗುತ್ತಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಹಲವು. ಬದಲಾದ ಪ್ರಪಂಚದ ಕೈಗಾರಿಕಾ ಬಂಡವಾಳವು ಡಿಜಿಟಲ್ ಬಂಡವಾಳಕ್ಕೆ ಬದಲಾಗುತ್ತಿದೆ. ಆದ್ದರಿಂದಲೇ ಇಂದು ಮಾಧ್ಯಮ ವೃತ್ತಿಪರರು ಡಿಜಿಟಲ್ ಬಂಡವಾಳದ ಬಲಿಪಶುಗಳಾಗಿದ್ದಾರೆ. ಈ ಹಿಂದೆ ಪತ್ರಕರ್ತರಿಗೆ ಸುದ್ದಿ ಹುಡುಕುವುದೇ ಕಷ್ಟವಾಗಿತ್ತು. ಸಮಾಜದ ಮೂಲಭೂತ ಅಂಶಗಳನ್ನು ಹೊರತರಲು ಸಾಧ್ಯವಾಯಿತು. ಪ್ರಸ್ತುತ ಯಾರೋ ಮಾಡಿದ ಸುದ್ದಿಯನ್ನೇ ಎಲ್ಲರೂ ಪುನರಾವರ್ತಿಸುತ್ತಾರೆ. ಸೌಲಭ್ಯಗಳು ಹೇರಳವಾಗಿವೆ. ಸುದ್ದಿ ಎಲ್ಲೆಡೆಗಳಿಗೆ ಕ್ಷಣಾರ್ಧದಲ್ಲಿ ತಲುಪುತ್ತದೆ. ಆದರೆ ಸಮಾಜದ ತಳಸ್ತರಕ್ಕೆ ತಲುಪುವುದಿಲ್ಲ. ಅಥವಾ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಗುತ್ತಿಗೆ ಕಾರ್ಮಿಕರು ಮತ್ತು ಸ್ಥಳೀಯ ವರದಿಗಾರರಿಗೆ ಕೆಲಸಕ್ಕೆ ಅನುಗುಣವಾಗಿ ವೇತನ ನೀಡಬೇಕು. ಅದಕ್ಕೆ ಸಾಕಷ್ಟು ಶ್ರಮ ಪಡಬೇಕಿದ್ದು, ಕಾರ್ಯಾಗಾರದಿಂದ ಅದಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು. 

          ಕಿಲಾದ  ಕಾರ್ಯಕಾರಿ ಸದಸ್ಯ ಟಿ.ಕೆ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ. ಡಿ.ಶಶಿ ನಂಬಿಯಾರ್ ಅವರು ಮಾಧ್ಯಮ ಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತು ಮಾತನಾಡಿದರು. ಮಾನವ ಸಂಪನ್ಮೂಲ ತರಬೇತುದಾರ ಅಜಿತ್ ಮೆನನ್ ವ್ಯಕ್ತಿತ್ವ ವಿಕಸನದ ಕುರಿತು ತರಗತಿ ನಡೆಸಿದರು.  ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಕೆಆರ್‍ಎಂಯು ರಾಜ್ಯಾಧ್ಯಕ್ಷ ಒ. ಮನು ಭರತ್ ಮತ್ತು ಕಿಲಾದ ವಿಜಯ್ ವಿಲ್ಸ್ ಮಾತನಾಡಿದರು. ಕಿಲಾದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಥಾಮಸ್ ಸ್ವಾಗತಿಸಿ, ಹಿರಿಯ ಸಹೋದ್ಯೋಗಿ ಕಿರಣ್ ಜೆ.ಎನ್ ವಂದಿಸಿದರು. ಆಯ್ದ 85 ಪತ್ರಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬಳಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries