ಚೆನ್ನೈ: ಚೆನ್ನೈನ ಮಹಾನಗರದ ಮೇಯರ್ ಆಗಿ 29 ವರ್ಷ ವಯಸ್ಸಿನ ಆರ್.ಪ್ರಿಯಾ ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ಮುಡಿಲಿಗೆ ಈಗ ಎರಡು ದಾಖಲೆಗಳು ಸೇರಿವೆ, ಚೆನ್ನೈನ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆ ಒಂದಾದರೆ, ದಲಿತ ಸಮುದಾಯ ಮಹಿಳೆಯೊಬ್ಬರು ಮೇಯರ್ ಆಗಿರುವುದು ಇದೇ ಮೊದಲು ಎನ್ನಲಾಗಿದೆ.

ಚೆನ್ನೈ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆಯಾಗಿರುವ ಪ್ರಿಯಾ, ಇತ್ತೀಚೆಗಷ್ಟೇ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪರವಾಗಿ ನಿಂತು ಕೌನ್ಸಿಲರ್ ಆಗಿ ಭಾರಿ ಬಹುಮತದೊಂದಿಗೆ ಗೆದ್ದಿದ್ದರು.
ಚೆನ್ನೈನಲ್ಲಿಯೇ ಹುಟ್ಟಿ ಬೆಳೆದಿರುವ ಪ್ರಯಾ ಅವರು, 30 ವರ್ಷಗಳಿಂದ ಪಕ್ಷದಲ್ಲಿರುವ ತಿರುವಿಕಾನಗರದ ವಾರ್ಡ್ ಮಟ್ಟದ ಡಿಎಂಕೆ ಪದಾಧಿಕಾರಿ ಪೆರಂಬೂರ್ ಆರ್ ರಾಜನ್ ಅವರ ಪುತ್ರಿ. ನಗರದ ಶ್ರೀ ಕನ್ಯಕಾ ಪರಮೇಶ್ವರಿ ಆರ್ಟ್ಸ್ ಕಾಲೇಜ್ ಫಾರ್ ವುಮೆನ್‌ನಲ್ಲಿ ಇವರು ಎಂಕಾಂ ಪದವಿ ಪಡೆದಿದ್ದಾರೆ.
'ನನ್ನನ್ನು ಚೆನ್ನೈನ ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಮತ್ತು ಡಿಎಂಕೆ ಕಾರ್ಯಕರ್ತರು ಮತ್ತು ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ. ಚೆನ್ನೈನ ಮೇಯರ್ ಆಗಿ, ನಾನು ನನ್ನ ಕೆಲಸವನ್ನು ಮಾಡುತ್ತೇನೆ. ಜನರು ಮತ್ತು ನನ್ನ ಪಕ್ಷದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನನಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಿಯಾ ಹೇಳಿದ್ದಾರೆ.