ಕೀವ್: ರಷ್ಯಾ ಉಕ್ರೇನ್ ಅನ್ನು ಎರಡು ಭಾಗಗಳಾಗಿ ಒಡೆಯಲು ಪ್ರಯತ್ನಿಸಬಹುದು ಎಂದು ಉಕ್ರೇನ್ ಮಿಲಿಟರಿ ಗುಪ್ತಚರ ಮುಖ್ಯಸ್ಥರು ಹೇಳಿದ್ದಾರೆ.
ಇಡೀ ದೇಶವನ್ನು ನುಂಗಲು ಸಾಧ್ಯವಿಲ್ಲ ಎಂಬುದನ್ನು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅರಿತುಕೊಂಡಿದ್ದಾರೆ ಮತ್ತು ಕೊರಿಯಾದಂತೆ ದೇಶವನ್ನು ವಿಭಜಿಸಲು ಪ್ರಯತ್ನಿಸಬಹುದೆಂದು ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವಿನ ದಶಕಗಳ ಹಳೆಯ ವಿಭಜನೆಯನ್ನು ಉಲ್ಲೇಖಿಸಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಗುಪ್ತಚರ ಮುಖ್ಯಸ್ಥ ಕಿರಿಲೋ ಬುಡಾನೋವ್ ಹೇಳಿದ್ದಾರೆ.
ಆಕ್ರಮಿತ ಪ್ರದೇಶಗಳನ್ನು ಒಂದು ಅರೆ-ರಾಜ್ಯ ರಚಿಸಲು ಆಕ್ರಮಣಕಾರರು ಪ್ರಯತ್ನಿಸುತ್ತಾರೆ ಮತ್ತು ಅದನ್ನು ಸ್ವತಂತ್ರ ಉಕ್ರೇನ್ ವಿರುದ್ಧ ಖೆಡ್ಡಾವಾಗಿ ಬಳಸುತ್ತಾರೆ. ಆಕ್ರಮಿತ ನಗರಗಳಲ್ಲಿ ಸಮಾನಾಂತರ ಸರ್ಕಾರಿ ರಚಿಸಲು ರಷ್ಯಾ ಪ್ರಯತ್ನಿಸುತ್ತದೆ ಮತ್ತು ಉಕ್ರೇನಿಯನ್ ಕರೆನ್ಸಿಯಾದ ಹ್ರಿವ್ನಿಯಾವನ್ನು ಬಳಸದಂತೆ ಜನರನ್ನು ನಿರ್ಬಂಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಉಕ್ರೇನಿಯನ್ ಪ್ರತಿರೋಧ ಒಟ್ಟು ಗೆರಿಲ್ಲಾ ಯುದ್ಧವಾಗಿ ಬೆಳೆಯುತ್ತದೆ ಎಂದು ಬುಡಾನೋವ್ ಭವಿಷ್ಯ ನುಡಿದಿದ್ದು, ಇದು ರಷ್ಯಾದ ಪ್ರಯತ್ನಗಳನ್ನು ಹಳಿತಪ್ಪಿಸುತ್ತದೆ ಎಂದಿದ್ದಾರೆ.