HEALTH TIPS

ಜಮ್ಮು ಮತ್ತು ಕಾಶ್ಮೀರ: ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ಕರಡು ಪ್ರಸ್ತಾವ

          ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರ, 5 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಪುನರ್‌ ವಿಂಗಡಣಾ ಆಯೋಗವು ತನ್ನ ಕರಡು ಪ್ರಸ್ತಾವದ ಕುರಿತು ಸೋಮವಾರ ಸಾರ್ವಜನಿಕರ ಆಕ್ಷೇಪಣೆಯನ್ನು ಆಹ್ವಾನಿಸಿದೆ.

              ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ ರಚನೆಯನ್ನು ಶಿಫಾರಸ್ಸು ಮಾಡುವ ಸಲುವಾಗಿ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಆಕ್ಷೇಪಣೆಯನ್ನು ಆಹ್ವಾನಿಸಿದ್ದು, ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಹಾಗೂ ಬಿಜೆಪಿ ಸಂಸದರ ಭಿನ್ನಾಭಿಪ್ರಾಯದ ಪ್ರಸ್ತಾವದೊಂದಿಗೆ ಆಯೋಗವು ತನ್ನ ಕರಡು ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತದ ಗೆಜೆಟ್‌ನಲ್ಲಿ ಪ್ರಕಟಿಸಿದೆ.

          ಸಾರ್ವಜನಿಕರ ಆಕ್ಷೇಪಣೆ ಸಲ್ಲಿಕೆಗೆ ಒಂದು ವಾರ ಕಾಲಾವಕಾಶ ನೀಡಿದ್ದು, 'ಕರಡು ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ/ ಸಲಹೆಗಳನ್ನು ಕಾರ್ಯದರ್ಶಿ, ಕ್ಷೇತ್ರ ಪುನರ್‌ ವಿಂಗಡಣಾ ಆಯೋಗ, ನಿರ್ವಚನ ಸದನ, ಅಶೋಕ ರಸ್ತೆ, ನವದೆಹಲಿ ಇಲ್ಲಿಗೆ ಮಾರ್ಚ್‌ 21ರ ಒಳಗೆ ಸಲ್ಲಿಸಬೇಕು' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

             ನಿವೃತ್ತ ನ್ಯಾಯಮೂರ್ತಿ ರಂಜನ್‌ ಪ್ರಕಾಶ ದೇಸಾಯಿ ನೇತೃತ್ವದಲ್ಲಿ ರಚನೆಯಾಗಿರುವ ಕ್ಷೇತ್ರ ಪುನರ್‌ ವಿಂಗಡಣಾ ಆಯೋಗದ ಕರಡು ಪ್ರಸ್ತಾವನೆಯಲ್ಲಿ ಜಮ್ಮು ಪ್ರದೇಶದಲ್ಲಿನ ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು 37 ರಿಂದ 43 ಕ್ಕೆ ಹೆಚ್ಚಿಸಲಾಗಿದ್ದು, ಕಾಶ್ಮೀರ ಪ್ರಾಂತ್ಯದಲ್ಲಿ ಅವುಗಳ ಸಂಖ್ಯೆಯನ್ನು 46 ರಿಂದ 47 ಕ್ಕೆ ಹೆಚ್ಚಿಸಿದೆ. ಕಣಿವೆ ಪ್ರದೇಶದಲ್ಲಿ ಕೇವಲ ಒಂದು ಸ್ಥಾನವನ್ನು ಹೆಚ್ಚಳ ಮಾಡುವ ಆಯೋಗದ ಪ್ರಸ್ತಾವವನ್ನು ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳು ತಿರಸ್ಕರಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries