ತಿರುವನಂತಪುರ: ವರ್ಕಮನದಲ್ಲಿ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮನೆಯಿಂದ ಬೆಂಕಿ ಏರುತ್ತಿರುವುದನ್ನು ಕಂಡ ನೆರೆಹೊರೆಯವರು ಓಡಿ ಬಂದರೂ ರಿಮೋಟ್ ವ್ಯವಸ್ಥೆಯಿಂದ ಗೇಟ್ ತೆರೆಯಲು ಸಾಧ್ಯವಾಗಲಿಲ್ಲ. ಇದಲ್ಲದೇ ಸಾಕುನಾಯಿ ಇದ್ದುದರಿಂದ ಗೋಡೆ ಜಿಗಿಯುವ ಕಾರ್ಯಾಚರಣೆ ತ್ವರಿತವಾಗಿ ನಡೆಯಲಿಲ್ಲ ಎಂದು ವರ್ಕಳ ಶಾಸಕ ಡಾ. ಜೋಯಿ ಮಾಹಿತಿ ನೀಡಿರುವರು.
ಸ್ಥಳೀಯರ ಪ್ರಕಾರ, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಗೇಟ್ ಮುರಿದು ಮನೆಗೆ ಪ್ರವೇಶಿಸಿದರು ಎಂದು ಶಾಸಕರು ತಿಳಿಸಿದ್ದಾರೆ. ಇದರೊಂದಿಗೆ ನೆರೆಹೊರೆಯವರು ಹೊರಗಿನಿಂದ ಸಾಧ್ಯವಾದಲ್ಲೆಲ್ಲಾ ನೀರು ಸುರಿದಿದ್ದಾರೆ. ಘಟನೆ ದುರದೃಷ್ಟಕರ ಎಂದು ಜಿಲ್ಲಾಧಿಕಾರಿ ನವಜೋತ್ ಖೋಸಾ ಹೇಳಿದ್ದಾರೆ. ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಮನೆ ಹೊತ್ತಿ ಉರಿದಿತ್ತು. ಬೆಂಕಿಯ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಪೊಲೀಸರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.