ನವದೆಹಲಿ: ಕೊ-ಲೊಕೇಶನ್ ಕೇಸಿನ ಮಧ್ಯೆ ((co-location case) ಮಧ್ಯೆ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SಇಃI) 2013ರಿಂದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಕಾರ್ಯಚಟುವಟಿಕೆಗೆ ಸಂಬಂಧಿಸಿದ ತನ್ನ ತಪಾಸಣಾ ವರದಿಗಳನ್ನು ಆರ್‌ಟಿಐ ಕಾಯಿದೆ ಅಡಿಯಲ್ಲಿ ಬಹಿರಂಗಪಡಿಸಲು ನಿರಾಕರಿಸಿದೆ.
ಸೆಬಿಯ ಕಾರ್ಯಚಟುವಟಿಕೆ ಬಗ್ಗೆ, ಮಾಜಿ ಮುಖ್ಯಸ್ಥರ ಕಾರ್ಯವೈಖರಿ, ಮಾಡಿರುವ ಕೆಲಸ ಬಗ್ಗೆ ಮಾಹಿತಿ ಕೇಳಿ ಆರ್ ಟಿಐ ಕಾರ್ಯಕರ್ತ ಸುಭಾಷ್ ಅಗರ್ವಾಲ್ ಪ್ರಶ್ನೆ ಕೇಳಿದ್ದರು, ಅದಕ್ಕೆ ಉತ್ತರಿಸಿರುವ ಸೆಬಿ, ಸುಭಾಷ್ ಅಗರ್ವಾಲ್ ಕೇಳಿದ ಮಾಹಿತಿಯು ಅದರ ಆಂತರಿಕ ಕಾರ್ಯಚಟುವಟಿಕೆಗೆ ಸಂಬಂಧಿಸಿದೆ. ಅದನ್ನು ಬಹಿರಂಗಪಡಿಸುವುದರಿಂದ ಅದರ ಮೇಲ್ವಿಚಾರಣೆ ಮತ್ತು ನಿಯಂತ್ರಕದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಡ್ಡಿಯಾಗಬಹುದು ಎಂದು ಹೇಳಿದ್ದಾರೆ.
ಮಾಹಿತಿ ಹಕ್ಕು (RTI) ಕಾಯ್ದೆಯನ್ನು ಬಳಸಿಕೊಂಡು, ಅಗರವಾಲ್ ಅವರು 2013 ರಿಂದ ಇಲ್ಲಿಯವರೆಗಿನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ (ಎನ್‌ಎಸ್‌ಇ) ಸಂಬಂಧಿಸಿದಂತೆ ಅದರ ಸಂಪೂರ್ಣ ತಪಾಸಣಾ ವರದಿಗಳ ಪ್ರತಿಗಳನ್ನು ಸೆಬಿಯಿಂದ ಕೋರಿದ್ದರು.
ಆರ್‌ಟಿಐ ಕಾಯ್ದೆಯಡಿ ಬ್ಯಾಂಕ್‌ಗಳಿಗೆ (ಖಾಸಗಿ ಅಥವಾ ಸಾರ್ವಜನಿಕ ವಲಯ) ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿದ್ಧಪಡಿಸಿದ ತಪಾಸಣಾ ವರದಿಗಳನ್ನು ಭಾರತದ ಸುಪ್ರೀಂ ಕೋರ್ಟ್ ಪರಿಗಣಿಸಿದೆ ಎಂದು ಆರ್‌ಟಿಐ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸುಭಾಷ್ ಅಗರ್ವಾಲ್ ಪಿಟಿಐ ಸುದ್ದಿಸಂಸ್ಥೆಗೆ ಕಳುಹಿಸಿದ ಇಮೇಲ್ ನಲ್ಲಿ ಉಲ್ಲೇಖಿಸಿದ್ದಾರೆ.
ಆರ್‌ಬಿಐ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ನಿಯಂತ್ರಕ ಸಂಸ್ಥೆಯಾಗಿರುವುದರಿಂದ, ಎನ್‌ಎಸ್‌ಇ(ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ)ಕ್ಕೆ ಸಂಬಂಧಿಸಿದಂತೆ ನಿಯಂತ್ರಕ ಸಾರ್ವಜನಿಕ ಪ್ರಾಧಿಕಾರವಾಗಿರುವ ಸೆಬಿಯು ಆರ್‌ಟಿಐ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಎನ್‌ಎಸ್‌ಇಗೆ ಸಂಬಂಧಿಸಿದಂತೆ ತಪಾಸಣೆ ವರದಿಗಳನ್ನು ಒದಗಿಸಲು ಬದ್ಧವಾಗಿದೆ ಎನ್ನುತ್ತಾರೆ ಅಗರ್ವಾಲ್.
ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಡಿ) ಅಡಿಯಲ್ಲಿ ರಕ್ಷಣೆಯನ್ನು ಪಡೆದುಕೊಂಡಿರುವ ಸೆಬಿ, ಅಗರ್ವಾಲ್ ಅವರು ಕೇಳಿದ ಮಾಹಿತಿಯು ವಾಣಿಜ್ಯ ಗೌಪ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ, ಮಾಹಿತಿ ಬಹಿರಂಗಪಡಿಸುವಿಕೆಯು ಅದರ ಸ್ಪರ್ಧಾತ್ಮಕತೆಗೆ ಹಾನಿಯನ್ನುಂಟುಮಾಡಬಹುದು ಎಂದು ಹೇಳಿದೆ.