ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದು, ವಾರಣಾಸಿಯಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಅವರು, ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಮತ್ತೊಂದು ಅವಧಿಗೆ ಮುಂದುವರೆಸಲು ಜನರೇ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಬಗ್ಗೆ ತಿರಸ್ಕಾರದ ಕಾರಣದಿಂದ ವಂಶಾಡಳಿತ ನಡೆಸುತ್ತಿರುವವರು ವೋಕಲ್ ಫಾರ್ ಲೋಕಲ್ ಹಾಗೂ ಸ್ವಚ್ಛ್ ಭಾರತ ಅಭಿಯಾನವನ್ನು ಹಾಸ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಉಕ್ರೇನ್ ವಿಷಯವಾಗಿಯೂ ವಿಪಕ್ಷಗಳು ರಾಜಕಾರಣ ನಡೆಸುತ್ತಿದ್ದು ಜನರ ಸಂಕಟವನ್ನು ಹೆಚ್ಚು ಮಾಡುತ್ತಿದೆ" ಎಂದು ಮೋದಿ ಆರೋಪಿಸಿದ್ದಾರೆ.
ಹಲವು ವರ್ಷಗಳ ಕಾಲ ಖಾದಿಯಿಂದಲೇ ಪ್ರಚಾರ ಪಡೆದುಕೊಂಡಿದ್ದ ರಾಜಕೀಯ ಪಕ್ಷವೊಂದು ಈಗ ಅದರ ಹೆಸರು ಹೇಳುವುದಕ್ಕೂ ಹಿಂಜರಿಯುತ್ತದೆ, ಆದರೆ ನಮ್ಮ ಸರ್ಕಾರ ಖಾದಿ ಹಾಗೂ ಯೋಗವನ್ನು ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳನ್ನಾಗಿಸಿದೆ ಎಂದು ಹೇಳಿದ್ದಾರೆ. ಮಾ.07 ರಂದು ಉತ್ತರ ಪ್ರದೇಶದ ಚುನಾವಣೆಗೆ ಕೊನೆಯ ಹಂತದ ಮತದಾನ ನಡೆಯಲಿದೆ.