ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಇತ್ತೀಚೆಗೆ ಯಕ್ಷಗಾನದ ವರಕವಿ ಪಾರ್ತಿಸುಬ್ಬ ವಿರಚಿತ ಪಂಚವಟಿ ಪ್ರಸಂಗದಿಂದಾಯ್ದ "ಖರಾಸುರ ವಧೆ, ಸೀತಾಪಹಾರ" ಯಕ್ಷಗಾನ ತಾಳಮದ್ದಳೆ ಜರಗಿತು.
ಈ ಸಂದರ್ಭದಲ್ಲಿ ಕಲಾಸಂಘಕ್ಕೆ ವಿಶೇಷ ದೇಣಿಗೆಯನ್ನು ನೀಡಿ ಸಹಕರಿಸಿದ ಯಕ್ಷಗಾನ ಪೋಷಕ, ವಿಮರ್ಶಕ ಪಡುಮಲೆ ಮನೋಹರ ಪ್ರಸಾದ್ ರೈ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ನಾರಾಯಣ ದೇಲಂಪಾಡಿ ಮನೋಹರ್ ಅವರನ್ನು ಅಭಿನಂದಿಸಿ ಮಾತನಾಡಿದರು. ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿ, ಡಿ. ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಯಂ. ರಮಾನಂದ ರೈ ದೇಲಂಪಾಡಿ ಅವರು ಶಾಲು, ಸ್ಮರಣಿಕೆ, ಪುಸ್ತಕಗಳನ್ನಿತ್ತು ಗೌರವಿಸಿ ಶುಭ ಹಾರೈಸಿದರು. ಲತಾ ಆಚಾರ್ಯ ಬನಾರಿ ನಿರೂಪಣೆ ಗೈದರು.
ಬಳಿಕ ನಡೆದ ಯಕ್ಷಗಾನ ತಾಳಮದ್ದಳೆಯ ಭಾಗವತಿಕೆಯಲ್ಲಿ ದಯಾನಂದ ಬಂದ್ಯಡ್ಕ, ಚೆಂಡೆಮದ್ದಳೆ ವಾದನದಲ್ಲಿ ಹೊನ್ನಪ್ಪ ಗೌಡ ಬೆಳ್ಳಿಪ್ಪಾಡಿ ಹಳೆಮನೆ, ಕೆ.ಶಿವರಾಮ ಕಲ್ಲೂರಾಯ ಕಲ್ಲಡ್ಕ, ವಿಷ್ಣುಶರಣ ಬನಾರಿ, ಸದಾನಂದ ಮಯ್ಯಾಳ, ಬಿ.ಹೆಚ್. ವೆಂಕಪ್ಪ ಗೌಡ ಬೆಳ್ಳಿಪ್ಪಾಡಿ ಅವರು ಸಹಕರಿಸಿದರು. ಪಾತ್ರವರ್ಗದಲ್ಲಿ ಡಿ. ವೆಂಕಟ್ರಮಣ ಮಾಸ್ತರ್, ರಾಮನಾಯ್ಕ ದೇಲಂಪಾಡಿ, ಭಾಸ್ಕರ ಮಾಸ್ತರ್ ಈಶ್ವರಮಂಗಲ, ರಾಮಯ್ಯ ರೈ ಕಲ್ಲಡ್ಕ ಗುತ್ತು, ಯಂ. ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ನಡುಬೈಲು, ನಾರಾಯಣ ಮಾಸ್ತರ್ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು ಅವರು ಅರ್ಥಧಾರಿಗಳಾಗಿ ಪಾಲ್ಗೊಂಡರು. ನಂದಕಿಶೋರ ಬನಾರಿ ಸ್ವಾಗತಿಸಿ, ಭೋಜರಾಜ ಆಚಾರ್ಯ ದೇಲಂಪಾಡಿ ವಂದಿಸಿದರು.