ಕೇವ್: ಭಾರತದ ತ್ರಿವರ್ಣಧ್ವಜವು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದಿಂದ ಹೊರಬರಲು ಮಾಡಲು ಸಹಾಯ ಮಾಡಿದೆ.
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲು ತಮ್ಮ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಇರಿಸುವಂತೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಈ ಹಿಂದೆ ಸಲಹೆ ನೀಡಿದ್ದರು.
ಉಕ್ರೇನ್‌ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಲು ಭಾರತದ ಧ್ವಜವು ತಮಗೆ ಮತ್ತು ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ ಎಂದು ಹೇಳಿದರು.
ಟರ್ಕಿ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳೂ ಭಾರತದ ಧ್ವಜವನ್ನು ಬಳಸುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದು, ಭಾರತೀಯ ಧ್ವಜ ಅವರಿಗೂ ಹೆಚ್ಚಿನ ಸಹಾಯವಾಗಿದೆ ಎಂದು ಹೇಳಿದರು.
ದಕ್ಷಿಣ ಉಕ್ರೇನ್‌ನ ಒಡೆಸಾದಿಂದ ಆಗಮಿಸಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು "ಭಾರತೀಯ ಧ್ವಜವನ್ನು ನಮ್ಮೊಂದಿಗೆ ಕೊಂಡೊಯ್ದರೆ ನಮಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಉಕ್ರೇನ್‌ನಲ್ಲಿ ನಮಗೆ ತಿಳಿಸಲಾಯಿತು ಎಂದು ಹೇಳಿದರು.
ವಿದ್ಯಾರ್ಥಿಗಳು ಸ್ವತಃ ಭಾರತೀಯ ಧ್ವಜವನ್ನು ತಯಾರಿಸಲು ಮಾರುಕಟ್ಟೆಯಿಂದ ಸ್ಪ್ರೇ ಪೇಂಟ್‌ಗಳನ್ನು ಹೇಗೆ ಖರೀದಿಸಿದರು ಎಂಬುದನ್ನು ವಿವರಿಸಿದರು.
'ನಾನು ಮಾರುಕಟ್ಟೆಗೆ ಓಡಿ, ಕೆಲವು ಕಲರ್ ಸ್ಪ್ರೇಗಳು ಮತ್ತು ಪರದೆಯನ್ನು ಖರೀದಿಸಿದೆ. ನಂತರ ನಾನು ಪರದೆಯನ್ನು ಕತ್ತರಿಸಿ ಭಾರತೀಯ ತ್ರಿವರ್ಣ ಧ್ವಜವನ್ನು ತಯಾರಿಸಲು ಅದನ್ನು ಸಿಂಪಡಿಸಿದೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.