ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದನ ನಡುವೆ ಅಮೆರಿಕಾ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧನೆಗಳನ್ನು ವಿಧಿಸುತ್ತಿದ್ದು ಇದರ ನಡುವೆ ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಮತ್ತು ಇತರ ಸರಕುಗಳನ್ನು ಖರೀಸುವ ಸಾಧತ್ಯೆ ಇದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮತ್ತು ಇತರ ಸರಕುಗಳನ್ನು ಖರೀದಿಸುವ ಅವಕಾಶವನ್ನು ಭಾರತಕ್ಕೆ ನೀಡಿತ್ತು. ಈ ಪ್ರಸ್ತಾಪವನ್ನು ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದರು.
ಭಾರತ ತನ್ನ ತೈಲ ಅಗತ್ಯದ ಶೇಕಡ 80ರಷ್ಟು ಆಮದು ವಿದೇಶಗಳಿಂದ ಮಾಡಿಕೊಳ್ಳುತ್ತಿದ್ದು ಸಾಮಾನ್ಯವಾಗಿ ರಷ್ಯಾದಿಂದ ಶೇ. 2ರಿಂದ 3ರಷ್ಟನ್ನು ಖರೀದಿಸುತ್ತದೆ. ಇನ್ನು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಈ ವರ್ಷ ಇಲ್ಲಿಯವರೆಗೆ ತೈಲ ಬೆಲೆಗಳ ಶೇಕಡ 40 ರಷ್ಟು ಏರಿಕೆಯಾಗಿರುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ. ಇದರಿಂದಾಗಿ ದೇಶದಲ್ಲಿ ಬೆಲೆ ಏರಿಕೆ ಬಿಸಿ ಕಡಿಮೆ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ರಷ್ಯಾ ತೈಲ ಮತ್ತು ಇತರ ಸರಕುಗಳನ್ನು ಭಾರೀ ರಿಯಾಯಿತಿಯಲ್ಲಿ ನೀಡುತ್ತಿದೆ. ನಾವು ಅದನ್ನು ತೆಗೆದುಕೊಳ್ಳಲು ಸಂತೋಷಪಡುತ್ತೇವೆ. ನಮಗೆ ಟ್ಯಾಂಕರ್, ವಿಮಾ ರಕ್ಷಣೆ ಮತ್ತು ತೈಲ ಮಿಶ್ರಣಗಳಂತಹ ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ನಾವು ಅದನ್ನು ಪಡೆದ ನಂತರ ನಾವು ರಿಯಾಯಿತಿ ಪ್ರಸ್ತಾಪವನ್ನು ತೆಗೆದುಕೊಳ್ಳುತ್ತೇವೆ ಎಂದು ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದರು.
ಕೆಲ ದೇಶಗಳು ರಷ್ಯಾದ ಮೇಲೆ ವ್ಯಾಪಾರಿ ನಿರ್ಬಂಧಗಳನ್ನು ಹಾಕುತ್ತಿದೆ. ಆದರೆ ಈ ನಿರ್ಬಂಧಗಳು ಭಾರತವು ಇಂಧನವನ್ನು ಆಮದು ಮಾಡಿಕೊಳ್ಳುವುದನ್ನು ತಡೆಯುವುದಿಲ್ಲ ಎಂದು ಭಾರತೀಯ ಅಧಿಕಾರಿ ಹೇಳಿದರು.