ನವದೆಹಲಿ:ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಐಐಟಿ ಪ್ರೊಫೆಸರ್ ಸಂದೀಪ್ ಪಾಠಕ್, ಶಿಕ್ಷಣ ತಜ್ಞ ಅಶೋಕ್ ಕುಮಾರ್ ಮಿತ್ತಲ್ ಹಾಗೂ ದಿಲ್ಲಿ ಶಾಸಕ ರಾಘವ್ ಚಡ್ಡಾ ಅವರು ಪಂಜಾಬ್‌ನಿಂದ ರಾಜ್ಯಸಭೆ ಅಥವಾ ಸಂಸತ್ತಿನ ಮೇಲ್ಮನೆಗೆ ಆಮ್ ಆದ್ಮಿ ಪಕ್ಷದಿಂದ (ಎಎಪಿ) ನಾಮನಿರ್ದೇಶಿತರಾಗಿದ್ದಾರೆ.

ಎಪ್ರಿಲ್ 9 ರಂದು ಐದು ರಾಜ್ಯಸಭಾ ಸ್ಥಾನಗಳು ತೆರವಾಗಲಿದ್ದು, ಮಾರ್ಚ್ 31 ರಂದು ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಇಂದು ಸಲ್ಲಿಸಬೇಕಾಗಿದೆ.
ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳ ಪೈಕಿ 92ರಲ್ಲಿ ಎಎಪಿ ಗೆದ್ದಿದೆ. ಮುಂಬರುವ ರಾಜ್ಯಸಭಾ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಎಎಪಿ ಬಲ ಮೂರರಿಂದ ಎಂಟಕ್ಕೆ ಏರಲಿದೆ.