ಹೈದರಾಬಾದ್ : ಎಟಿಎಂನಲ್ಲಿ ಇನ್ನುಮುಂದೆ ಹಣ ಮಾತ್ರವಲ್ಲದೇ ಚಿನ್ನದ ನಾಣ್ಯಗಳೂ ಸಿಗಲಿವೆ! ದುಬೈನಲ್ಲಿ ಎರಡು ಕಡೆ ಮತ್ತು ಲಂಡನ್ನ ಐದು ಸ್ಥಳಗಳಲ್ಲಿ ಸದ್ಯ ಲಭ್ಯ ಇರುವ ಈ ಸೌಲಭ್ಯವನ್ನು ಭಾರತದಲ್ಲಿಯೂ ಪರಿಚಯಿಸುತ್ತಿದೆ ಗೋಲ್ಡ್ ಸಿಕ್ಕಾ ಸಂಸ್ಥೆ.
ಹೈದರಾಬಾದ್ : ಎಟಿಎಂನಲ್ಲಿ ಇನ್ನುಮುಂದೆ ಹಣ ಮಾತ್ರವಲ್ಲದೇ ಚಿನ್ನದ ನಾಣ್ಯಗಳೂ ಸಿಗಲಿವೆ! ದುಬೈನಲ್ಲಿ ಎರಡು ಕಡೆ ಮತ್ತು ಲಂಡನ್ನ ಐದು ಸ್ಥಳಗಳಲ್ಲಿ ಸದ್ಯ ಲಭ್ಯ ಇರುವ ಈ ಸೌಲಭ್ಯವನ್ನು ಭಾರತದಲ್ಲಿಯೂ ಪರಿಚಯಿಸುತ್ತಿದೆ ಗೋಲ್ಡ್ ಸಿಕ್ಕಾ ಸಂಸ್ಥೆ.
ಹೈದರಾಬಾದ್‌ನಲ್ಲಿ ಮೂರು ಸ್ಥಳಗಳಲ್ಲಿ ಚಿನ್ನದ ಎಟಿಎಂಗಳು ಕಾರ್ಯನಿರ್ವಹಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೈದರಾಬಾದ್‌ನ ಬೇಗಂಪೇಟ್‌ನಲ್ಲಿರುವ ಗೋಲ್ಡ್ ಸಿಕ್ಕಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹೈದರಾಬಾದ್‌ನ ಅಬಿಡ್ಸ್, ಪಾನ್ ಬಜಾರ್ ಮತ್ತು ಘಾನ್ಸಿ ಬಜಾರ್ ಪ್ರದೇಶಗಳಲ್ಲಿ ಗೋಲ್ಡ್ ಸಿಕ್ಕಾ ಎಟಿಎಂಗಳು ಇನ್ನೆರಡು ತಿಂಗಳುಗಳಲ್ಲಿ ಶುರು ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಎಟಿಎಂಗಳ ಮೂಲಕ 0.5 ಗ್ರಾಂನಿಂದ 100 ಗ್ರಾಂ ಚಿನ್ನದ ನಾಣ್ಯಗಳನ್ನು ಡ್ರಾ ಮಾಡಬಹುದು. ಚಿನ್ನದ ಬೆಲೆ ದಿನನಿತ್ಯವೂ ಏರುಪೇರು ಆಗುತ್ತಿರುತ್ತದೆ. ಅದರ ಬಗ್ಗೆಯೂ ಎಟಿಎಂ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಶೇ.99.99 ಶುದ್ಧತೆಯ 0.5, 1, 2, 5, 10, 20, 50, 100-ಗ್ರಾಂ ಚಿನ್ನದ ನಾಣ್ಯಗಳನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಡ್ರಾ ಮಾಡಬಹುದು. ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಕಾರ್ಡ್‌ಗಳನ್ನು ಸಹ ನೀಡಲಾಗುವುದು. ನಂತರದ ದಿನಗಳಲ್ಲಿ ದೇಶಾದ್ಯಂತ 3 ಸಾವಿರ ಎಟಿಎಂಗಳನ್ನು ಸ್ಥಾಪಿಸುವುದು ಎಂದು ಕಂಪೆನಿ ಹೇಳಿಕೊಂಡಿದೆ.