ತಿರುವನಂತಪುರ: ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಒಂದನೇ ತರಗತಿಗೆ ಸೇರಲು ಆರು ವರ್ಷ ಪೂರೈಸಬೇಕು. ಆದ್ದರಿಂದ ಹೊಸ ಶೈಕ್ಷಣಿಕ ವರ್ಷದಿಂದ ಆರು ವರ್ಷ ಫೂರ್ಣಗೊಳ್ಳದ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸುವಂತಿಲ್ಲ.
ಪ್ರಸ್ತುತ ಒಂದನೇ ತರಗತಿಗೆ ಸೇರಲು ಆರು ವರ್ಷ ತುಂಬಬೇಕು ಆದರೆ ಐದು ವರ್ಷ ಮೇಲ್ಪಟ್ಟವರು ಸರ್ಕಾರಿ ಅನುದಾನಿತ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.
ಆದರೆ ಕೇಂದ್ರ ನೀತಿ ಅದನ್ನು ನಿಷೇಧಿಸಿದೆ. ಕೇಂದ್ರೀಯ ವಿದ್ಯಾಲಯಗಳು ಈಗಾಗಲೇ ಇದನ್ನು ಜಾರಿಗೆ ತಂದಿವೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಕೇರಳ ಸಿದ್ಧತೆ ನಡೆಸಿದೆ. ಜೊತೆಗೆ ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಶಾಲೆಗಳ ಏಕೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ.
ಕೇಂದ್ರದ ಹೊಸ ನೀತಿಯು ಒಂದರಿಂದ ಐದನೇ ತರಗತಿಗಳನ್ನು ಪ್ರಾಥಮಿಕ, ಆರರಿಂದ ಎಂಟರವರೆಗೆ ಯುಪಿ ಮತ್ತು ಒಂಬತ್ತರಿಂದ ಹತ್ತರಿಂದ ಪ್ರೌಢಶಾಲೆ ಎಂದು ವರ್ಗೀಕರಿಸಲಾಗಿದೆ.