ಕಾಸರಗೋಡು: ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್ ಅಜನೂರ್ ಗ್ರಾಮ ಪಂಚಾಯಿತಿಯ ಸಿಡಿಎಸ್ ವತಿಯಿಂದ ಮಾದರಿ ಹಣ್ಣಿನ ತೋಟ 'ಅಗ್ರಿ ನ್ಯೂಟ್ ಗಾರ್ಡನ್'ಮೂಲಕ ನಡೆಸಲಾದ ಕಲ್ಲಂಗಡಿ ಹಣ್ಣಿನ ಕೊಯ್ಲು ಉತ್ಸವ ನಡೆಯಿತು.
ಹೊಸದುರ್ಗ ಶಾಸಕ ಇ.ಚಂದ್ರಶೇಖರನ್ ಕಲ್ಲಂಗಡಿ ಹಣ್ಣಿನ ಕೊಯ್ಲು ಉತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾ ಮಿಷನ್ ಕೋರ್ಡಿನೇಟರ್ ಟಿ.ಸುರೇಂದ್ರನ್, ಎಡಿಎಂಸಿ ಸಿ.ಎಚ್ ಇಕ್ಬಾಲ್ ಯೋಜನೆ ಬಗ್ಗೆ ಮಾಹಿತಿ ನೀಢಿದಶಿಜುಮಾಸ್ಟರ್‍ರು.ಪಂಚಾಯಿತಿ ಸಥಾಯೀ ಸಮಿತಿ ಅಧ್ಯಕ್ಷರಾದ ಕೆ. ಕೃಷ್ಣನ್ ಮಾಸ್ಟರ್, ಶೀಬಾ ಉಮ್ಮರ್, ಗ್ರಾಪಂ ಸದಸ್ಯ, ಕಾಞಂಗಾಡು ನಗರಸಭಾ ಸದಸ್ಯಪುಷ್ಪಾ ಉಪಸ್ಥಿತರಿದ್ದರು. ಸಿಡಿಎಸ್ ಅಧ್ಯಕ್ಷೆ ರತ್ನಾ ಕುಮಾರಿ ಸ್ವಾಗತಿಸಿದರು. ಉಪಾಧ್ಯಕ್ಷೆ ಬಂದು ಬಾಬು ವಂದಿಸಿದರು.