ತಿರುವನಂತಪುರ: ಹನಿಟ್ರ್ಯಾಪ್‍ನಲ್ಲಿ ಬೀಳಬೇಡಿ ಎಂದು ಪೋಲೀಸರಿಗೆ ಡಿಜಿಪಿ ಎಚ್ಚರಿಕೆ ನೀಡಿದ್ದಾರೆ. ಡಿಜಿಪಿ ಅನಿಲ್ ಕಾಂತ್ ಪೋಲೀಸರಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳು ಗಮನಕ್ಕೆ ಬಂದಿವೆ. ಹನಿಟ್ರ್ಯಾಪ್‍ನಲ್ಲಿ ತನಿಖಾ ಸಂಸ್ಥೆಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ವಿರುದ್ಧ ರಾಜ್ಯ ಪೋಲೀಸರು ಎಚ್ಚೆತ್ತುಕೊಳ್ಳಬೇಕು ಹಾಗೂ ಹನಿಟ್ರ್ಯಾಪ್ ಒಳಗಾಗುವುದು ದೃಢಪಟ್ಟರೆ ಕೂಡಲೇ ಪೋಲೀಸ್ ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕು ಎಂದು ಡಿಜಿಪಿ ಎಚ್ಚರಿಸಿದ್ದಾರೆ.