ಉಪ್ಪಳ: ಎಲ್ಲ ಸೌಲಭ್ಯಗಳೊಂದಿಗೆ ಮಕ್ಕಳನ್ನು ಬೆಳೆಸುವ ನಾವು ಅವರು ಮಾನವರಾಗುವ ಮೂಲ ಸಂಸ್ಕಾರ ನೀಡುವಲ್ಲಿ ಎಷ್ಟು ಗಂಭೀರವಾಗಿ ಯೋಚಿಸುತ್ತೇವೆ ಎಂಬುದು ಪ್ರಧಾನ. ತಾಯ ಮಡಿಲು ಸಮಸ್ಕಾರದ ತೊಟ್ಟಿಲಾಗಬೇಕಾದ ಅಗತ್ಯವಿದೆ ಎಂದು ಕೊಂಡೆವೂರು ನಿತ್ಯಾನಂದಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಮಹಿಳಾ ವಿಭಾಗ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೈವಳಿಕೆ ವಲಯ ಜಂಟಿ ಆಶ್ರಯದಲ್ಲಿ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಅರಿವಿನ ಬೆಳಕು, ಸಾಧಕರಿಗೆ ಗೌರವಾರ್ಪಣೆ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಆಶೀರ್ವಚವನ ನೀಡಿದರು.
ಭಯೋತ್ಪಾದನೆ, ಹಿಂಸಾಚಾರ ಹೆಚ್ಚಳಗೊಳ್ಳಲು ಸಂಸ್ಕಾರದ ಕೊರತೆಯೇ ಪ್ರಧಾನ ಕಾರಣ. ನಮ್ಮ ತಾಯಂದಿರ ಮಡಿಲಲ್ಲಿ ದ್ರೌಪದಿ, ಸೀತೆ, ನಚಿಕೇತ, ಧ್ರುವ, ಪ್ರಹ್ಲಾದರು ಹುಟ್ಟಿಬರಬೇಕು. ಕಠಿಣ ಮಾರ್ಗದಲ್ಲಿ ಸಾಧನೆ ಮಾಡಿದರೆ ಅದು ಸಾರ್ಥಕತೆ ನೀಡುತ್ತದೆ ಎಂದರು.
ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆಯ ರಕ್ಷಣೆ ಎಂಬುದು ಸಂಸ್ಕೃತಿಯ ರಕ್ಷಣೆ ಎಂಬ ಜಾಗೃತಿ ಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಕೃಷಿಯೂ ಹೇರಳವಾಗಿ ನಡೆಯಬೇಕಿದೆ ಎಂದವರು ಆಗ್ರಹಿಸಿದರು.
ಮಾತೃಶ್ರೀ ಪದ್ಮಾವತಿ ಅಮ್ಮ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ವಿಭಾಗ ಅಧ್ಯಕ್ಷೆ ವಿದ್ಯಾಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಡಾ.ಮೀನಾಕ್ಷಿ ರಾಮಚಂದ್ರ ಪ್ರಧಾನ ಉಪನ್ಯಾಸ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ಸಮನ್ವಯಾಧಿಕಾರಿ ಕವಿತಾ, ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕದ ಸದಸ್ಯೆ ಜಯಂತಿ, ನಮಿತಾ ಕಿಶೋರ್ ಶುಭಾಶಂಸನೆಗೈದರು. ವಿ ಫ್ಲವರ್ ಪೆÇ್ರಪ್ರೈಟರ್ ಅರುಣಾಕ್ಷಿ, ಕನ್ನಡ ಭವನದ ಸಂಧ್ಯಾರಾಣಿ ಟೀಚರ್, ಸಮಾಜಸೇವಕಿ ಶಾರದಾ ವೈ, ಜಯಂತಿ ಜಯಾನಂದ ಕುಮಾರ್, ರಾಜಶ್ರೀ ಟಿ.ರೈ ಪೆರ್ಲ, ಅಕ್ಷತಾ ರಾಜ್ ಪೆರ್ಲ ಅವರಿಗೆ ಗೌರವಾರ್ಪಣೆ ನಡೆಯಿತು. ರೇಶ್ಮಾ ಸುನಿಲ್ ಸ್ವಾಗತಿಸಿ, ವಿನೋದಾ ರೈ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾಗೀತಾ ಬಾಯಾರು ವಂದಿಸಿದರು.
ವಿವಿಧ ಭಜನಾ ತಂಡಗಳಿಂದ ಭಜನೆ, ತಿರುವಾದಿರ, ಮೋಹಿನಿಯಾಟಂ ನೃತ್ಯ ಕಾರ್ಯಕ್ರಮ ಜರುಗಿತು.