HEALTH TIPS

ಡಿಜಿಟಲ್ ಮಾಹಿತಿ ಕಣ್ಗಾವಲು ಶಾಸನಬದ್ಧ ಸಂಸ್ಥೆಗಷ್ಟೇ ಅಧಿಕಾರ

             ನವದೆಹಲಿ: ದೇಶದಲ್ಲಿನ, ಶಾಸನಬದ್ದ ಕಾನೂನು ಜಾರಿ ಸಂಸ್ಥೆಗಳಷ್ಟೇ ದೂರವಾಣಿ ಸಂಭಾಷಣೆ ಅಥವಾ ವಿದ್ಯುನ್ಮಾನ ಸ್ವರೂಪದಲ್ಲಿ ಪ್ರಸರಣವಾಗುವ ಮಾಹಿತಿ ದಾಖಲಿಸುವ ಅಧಿಕಾರವನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

               ಸಂಸತ್ತಿನಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಕುಮಾರ್ ಮಿಶ್ರಾ ಈ ಮಾಹಿತಿ ನೀಡಿದ್ದಾರೆ.

             ವಾಟ್ಸ್‌ಆಯಪ್‌ ಚರ್ಚೆ ಸೇರಿದಂತೆ ಯಾವುದೇ ರೀತಿಯ ಡಿಜಿಟಲ್ ಮಾಹಿತಿ ಮೇಲೆ ಕಣ್ಗಾವಲು ಇಡಲು ಯಾವುದಾದರೂ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಗೆ ಅಧಿಕಾರ ನೀಡಲಾಗಿದೆಯೇ ಎಂದು ಪ್ರಶ್ನಿಸಲಾಗಿತ್ತು.

             ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ರ ಅನ್ವಯ ಕೇವಲ ದೇಶದ ಶಾಸನಬದ್ಧ ಕಾನೂನು ಜಾರಿ ಸಂಸ್ಥೆಗಳಿಗಷ್ಟೇ ಇಂತಹ ಅಧಿಕಾರವಿದೆ ಎಂದು ಸಚಿವರು ತಿಳಿಸಿದ್ದಾರೆ.

           'ಮಾಹಿತಿ ತಂತ್ರಜ್ಞಾನ (ಮಾಹಿತಿ ಸುರಕ್ಷತೆ, ಅವಲೋಕನ, ನಿರ್ವಹಣಾ) ನಿಯಮಗಳು 2009'ರಲ್ಲೂ ಇದರ ಉಲ್ಲೇಖವಿದೆ. ಮಾಹಿತಿ ಆಲಿಸಬೇಕಾದ ಕ್ರಮಗಳ ಕುರಿತಂತೆಯೂ ನಿರ್ದಿಷ್ಟ ಮಾರ್ಗಸೂಚಿ ನೀಡಲಾಗಿದೆ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries