ನವದೆಹಲಿ: ಔಷಧೀಯ ಸಸ್ಯಗಳು, ಗಿಡಮೂಲಿಕೆಗಳ ಉದ್ಯಾನ ‘ಆರೋಗ್ಯ ವನ‘ವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಂಗಳವಾರ ಉದ್ಘಾಟಿಸಿದರು.
ರಾಷ್ಟ್ರಪತಿಗಳ ಎಸ್ಟೇಟ್ ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಆರೋಗ್ಯ ವನಂ'ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ರಾಷ್ಟ್ರಪತಿ ಕೋವಿಂದ್ ಅವರು ಉದ್ಘಾಟಿಸಿದರು.
"6.6 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಆರೋಗ್ಯ ವನವನ್ನು, ಯೋಗ ಮುದ್ರೆಯಲ್ಲಿ ಕುಳಿತಿರುವ ಮನುಷ್ಯನ ಆಕಾರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಉದ್ಯಾನದಲ್ಲಿ ಆಯುರ್ವೇದ ಚಿಕಿತ್ಸಕ ಉದ್ದೇಶಗಳಿಗಾಗಿ ಬಳಸಲಾಗುವ ಸುಮಾರು 215 ಗಿಡಮೂಲಿಕೆಗಳು ಮತ್ತು ಸಸ್ಯಗಳನ್ನು ಒಳಗೊಂಡಿದೆ ಎಂದು ರಾಷ್ಟ್ರಪತಿ ಭವನವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಆರೋಗ್ಯ ವನಮ್‌ನ ಇತರ ಕೆಲವು ವೈಶಿಷ್ಟ್ಯಗಳೆಂದರೆ ನೀರಿನ ಕಾರಂಜಿಗಳು, ಯೋಗ ವೇದಿಕೆ, ನೀರಿನ ಕಾಲುವೆ, ಕಮಲದ ಕೊಳ ಎಂದು ಮಾಹಿತಿ ನೀಡಿದೆ.
ಆಯುರ್ವೇದ ಸಸ್ಯಗಳ ಮಹತ್ವ ಮತ್ತು ಅವುಗಳ ಪ್ರಯೋಜನಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಆರೋಗ್ಯ ವನಂ ಪರಿಕಲ್ಪನೆಯನ್ನು ರೂಪಿಸಲಾಗಿದೆ. ಆರೋಗ್ಯ ವನಂ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ ಎಂದು ತಿಳಿಸಿದೆ.