ಮಂಜೇಶ್ವರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಜತ್ತೂರು(ಮಾಡ) ಶಾಲೆಯಲ್ಲಿ ಮಕ್ಕಳಿಗಾಗಿ ಉಚಿತ ವೈದ್ಯಕೀಯ ಶಿಬಿರ ಐಎಂಎ ವತಿಯಿಂದ ನಡೆಯಿತು.
ವೈದ್ಯರಾದ ಜಯಪಾಲ್ ಶೆಟ್ಟಿ, ಡಾ. ವೀರೇಂದ್ರ, ಡಾ. ಮಹೇಶ್, ಡಾ.ಪ್ರಸಾದ್, ಡಾ. ಸುಮಂಗಳ ಸೇರಿದ ತಜ್ಞ ವೈದ್ಯರ ತಂಡ ಶಿಬಿರಕ್ಕೆ ನೇತೃತ್ವ ನೀಡಿತು. ಎಲ್ಲಾ ಮಕ್ಕಳನ್ನು ತಪಾಸಣೆ ನಡೆಸಿ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಭಟ್ ಹಾಗೂ ಶಾಲಾ ಸಿಬ್ಬಂದಿ ವರ್ಗ ಮತ್ತು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.