ಪೆರ್ಲ:ಆರಾಧನಾ ಕ್ರಿಯೇಷನ್ನ್ ಸಾರಡ್ಕ ಇದರ ವತಿಯಿಂದ , ಆರಾಧನಾ ಕಲಾಭವನ ಸಾರಡ್ಕದಲ್ಲಿ ಹಿರಿಯ ಕಿರಿಯ ಕಲಾವಿದರಕೂಡುವಿಕೆಯಿಂದ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ಮಾ. 20 ರಂದು ಸಂಜೆ 3 ಗಂಟೆಯಿಂದ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಡಾ ಸತೀಶ ಪುಣಿಚಿತ್ತಾಯ ಪೆರ್ಲ, ಚೆಂಡೆಯಲ್ಲಿ ಶ್ರೀಶ ನಾರಾಯಣ ಕೋಳಾರಿ ಮತ್ತು ಮದ್ದಳೆಯಲ್ಲಿ ಆದಿತ್ಯ ಬರೆಕೆರೆ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಸದಾಶಿವ ಆಳ್ವ ತಲಪಾಡಿ, ಭಾಸ್ಕರ ರಾವ್ ಅಳಿಕೆ, ಜಯರಾಮ ದೇವಸ್ಯ, ಶಂಕರ್ ಸಾರಡ್ಮ ಮತ್ತು ಮಂಜುನಾಥÀ ಆಚಾರ್ಯ ಪೆರುವಾಯಿ ಸಹಕರಿಸುವರು. ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ಅಡ್ಯನಡ್ಕ ಶಾಖೆ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.