HEALTH TIPS

ಕರ್ನಾಟಕ ಸಂಗೀತ ಮತ್ತು ಭರತನಾಟ್ಯ ಅಧ್ಯಯನ ಮಾಡುತ್ತಿರುವೆ; ಮೋಹಿನಿಯಾಟ್ಟಂ ನಿಲ್ಲಿಸಲು ನಾನು ಹೇಳಿಲ್ಲ; ನೀನಾ ಪ್ರಸಾದ್ ಅವರ ನೃತ್ಯವನ್ನು ತಡೆದಿದ್ದಕ್ಕೆ ವಿವರಣೆ ನೀಡಿದ ಕಲಾಂ ಪಾಷಾ

                                            

                     ಪಾಲಕ್ಕಾಡ್: ಮೋಹಿನಿಯಾಟ್ಟಂ ಪ್ರದರ್ಶನಕ್ಕೆ ಪೋಲೀಸರನ್ನು ಬಳಸಿ ಖ್ಯಾತ ನೃತ್ಯಗಾರ್ತಿ ನೀನಾ ಪ್ರಸಾದ್ ಅವರ ಪ್ರದರ್ಶನಕ್ಕೆ ಅಡ್ಡಿಪಡಿಸಿದ ವಿವಾದವನ್ನು  ಪಾಲಕ್ಕಾಡ್ ಜಿಲ್ಲಾ ನ್ಯಾಯಾಧೀಶ ಕಲಾಂ ಪಾಷಾ ತಳ್ಳಿಹಾಕಿದ್ದಾರೆ. ತನ್ನ ನೌಕರನೋರ್ವ ತೀವ್ರ ಗದ್ದಲದ ಕಾರಣ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಪೋಲೀಸರಿಗೆ ತಿಳಿಸಿದ್ದು ಎಂದು ಕಲಾಂ ಪಾಷಾ ಹೇಳಿರುವರು. ಘಟನೆ ಕುರಿತು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ ವಕೀಲರನ್ನೂ ಕಲಾಂ ಪಾಷಾ ಟೀಕಿಸಿದರು.

                 ಆರು ವರ್ಷಗಳಿಂದ ಕರ್ನಾಟಕ ಸಂಗೀತವನ್ನು ತಾನು ಕಲಿಯುತ್ತಿರುವೆÀ. ಭರತನಾಟ್ಯದಲ್ಲೂ ಪಾದಾರ್ಪಣೆ ಮಾಡಿದ್ದೆನೆ.  ಹಾಗಾಗಿ ಧಾರ್ಮಿಕ ಕಾರಣಗಳಿಂದ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿಲ್ಲ.  ಅಂತಹ ಉಲ್ಲೇಖಗಳು ವೇದನೆ ತರಿಸಿದೆ.  ಅಸಹನೀಯ ಶಬ್ದವನ್ನು ನಿಯಂತ್ರಿಸಲು ಉದ್ಯೋಗಿ ಕೇಳಿದ್ದು, ತಾನಲ್ಲ. ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಡಿವೈಎಸ್ಪಿಗೆ ತಿಳಿಸಿರುವುದಾಗಿ ಕಲಾಂಪಾಷಾ ವಿವರಿಸಿದರು.

                 ತನ್ನ ವಿರುದ್ಧ ವಕೀಲರ ಪ್ರತಿಭಟನೆ ಕಾನೂನು ಬಾಹಿರ. ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುವುದು ಸರಿಯಾದ ಕ್ರಮವಲ್ಲ. ಘೋಷಣೆಗಳನ್ನು ಕೂಗುವುದು ಮತ್ತು ನೌಕರರಿಗೆ ಕಿರಿಕಿರಿ ಉಂಟುಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

                    ನೀನಾ ಪ್ರಸಾದ್ ಅವರ ಮೋಹಿನಿಯಾಟ್ಟಂ ನಿಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಕಲಾಂಪಾಷಾ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಈ ವಿವರಣೆಯನ್ನು ನೀಡಿದರು. ಘಟನೆಯನ್ನು ವಿರೋಧಿಸಿ ಯುವಮೋರ್ಚಾ ನಗರದಲ್ಲಿ ಕೆಲವು ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಇದೇ ವೇಳೆ ವಕೀಲರ ಸಂಘವೂ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಕಲಾಂಪಾಷಾ ಪ್ರತಿಕ್ರಿಯೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries