ಕಾಸರಗೋಡು: ಭಾರತೀಯ ಸಂಸ್ಕøತಿಯು ಪ್ರೀತಿ, ತಾಳ್ಮೆ, ಕ್ಷಮೆ, ನಿಸ್ವಾರ್ಥತೆಯಂತಹ ಸಾತ್ವಿಕ ಗುಣಗಳನ್ನು ಪ್ರತಿಬಿಂಬಿಸಿ ಮಾನವೀಯತೆಯ ಮೌಲ್ಯಗಳನ್ನು ನೀಡಿದೆ. ಅಂತಹ ಮೌಲ್ಯಗಳನ್ನು ಕಾಪಾಡಿಕೊಂಡು ಮಕ್ಕಳಲ್ಲಿ ಅಂತಹ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾದುದು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು. ಮಕ್ಕಳಿಗೆ ಚಿಕ್ಕಂದಿನಿಂದಲೇ ಸನಾತನ ಮೌಲ್ಯಗಳನ್ನು ತಿಳಿ ಹೇಳುವ ಮೂಲಕ ಸಂಸ್ಕøತಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಮತ್ತು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಾಗಿದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದರು.
ಸ್ವಾಮೀಜಿಯವರು ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಆಯೋಜಿಸಿದ ಸಾಂಸ್ಕøತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳನ್ನು ಬುಧವಾರ ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಪದ್ಮನಾಭ ತಂತ್ರಿ ಅರವತ್ ಅವರು ಆಶೀರ್ವಚನವಿತ್ತರು. ಕಾರ್ಯಕ್ರಮದಲ್ಲಿ ರಾಮ ಕ್ಷತ್ರಿಯ ಸೇವಾ ಸಂಘ ಮಂಗಳೂರು ಇದರ ಗೌರವಾಧ್ಯಕ್ಷ ಜೆ.ಕೆ.ರಾವ್ ಮಂಗಳೂರು ಅವರು ಅಧ್ಯಕ್ಷತೆ ವಹಿಸಿದರು. ಕರ್ನಾಟಕ ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ಕರ್ನಾಟಕ ಮತ್ತು ಎಕ್ಸಿಕ್ಯೂಟೀವ್ ಸದಸ್ಯೆ ಭಾ.ಜ.ಪ. ದಕ್ಷಿಣ ಕನ್ನಡ ಜಿಲ್ಲಾ ಸದಸ್ಯೆ ಡಾ.ಮಂಜುಳಾ ಅನಿಲ್ ರಾವ್ ಅವರು ದೇವಸ್ಥಾನದ ಮಹಿಮೆ ಮತ್ತು ಭಾರತೀಯ ಸಂಸ್ಕøತಿ ಕುರಿತು ಮಾಹಿತಿ ನೀಡಿದರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ರಮೇಶ ಕುದ್ರೆಕ್ಕೋಡು ಕುಂಬಳೆ, ಕ್ಷೇತ್ರದ ಪಾತ್ರಿ ಪ್ರವೀಣ್ ನಾಯಕ್ ಪಾಂಗೋಡು, ದೇವಸ್ಥಾನ ಸೇವಾ ಸಮಿತಿಯ ನಾಗೇಶ್ ಪಿ.ನಾಯಕ್ ಮಂಗಳೂರು, ಸಾಂಸ್ಕøತಿಕ ಕಾರ್ಯಕ್ರಮಗಳ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾಸಂಘದ ಗೌರವಾಧ್ಯಕ್ಷ ನಿರಂಜನ ಕೊರಕ್ಕೋಡು, ನಾಗರಕಟ್ಟೆ ಶ್ರೀ ಶಾರದಾಂಬಾ ಭಜನಾಶ್ರಮದ ಅಧ್ಯಕ್ಷ ಚಂದ್ರಕಾಂತ ನಾಗರಕಟ್ಟೆ, ಬಿಇಎಂ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಜೇಶ್ಚಂದ್ರ ಕೆ.ಪಿ.ಅಣಂಗೂರು, ಅನಿಲ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಭವನದ ಸ್ಥಾಪಕ ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಕನ್ನಡ ಭವನ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಎಡನೀರು ಶ್ರೀ ಮತ್ತು ತಂತ್ರಿವರ್ಯ ಬ್ರಹ್ಮಶ್ರೀ ಪದ್ಮನಾಭ ತಂತ್ರಿ ಅರವತ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಭರವಸೆಯ ಬೆಳಕು ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಭಕ್ತಿಗಾನಾರ್ಚನೆ ನಡೆಯಿತು.