ಗಡಿ ಗ್ರಾಮ ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯ ಶೇಣಿ ಬಪ್ಪಳಿಗೆ ಎಂಬಲ್ಲಿ ಸೋಮವಾರ ರಾತ್ರಿ ಬರ್ಬರ ಕೃತ್ಯ ನಡೆದಿದೆ. ಬಪ್ಪಳಿಕೆಯ ದಿ.ಬಲ್ತೀಸ್ ಡಿಸೋಜ ಎಂಬವರ ಪುತ್ರ ಥೊಮಸ್ (45) ಮೃತ ವ್ಯಕ್ತಿ.ಈತನ ಸಹೋದರ ಅಜು ಯಾನೆ ರಾಜೇಶ್ ಕತ್ತಿಯಿಂದ ಕಡಿದಿರುವುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಇದೀಗ ಈತ ಪೋಲೀಸರ ಮುಂದೆ ಶರಣಾಗಿದ್ದಾನೆ.
ನಿನ್ನೆ ರಾತ್ರಿ 10. ರ ವೇಳೆಗೆ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕುಡಿತದ ಮತ್ತಿನಲ್ಲಿ ಸಹೋದರರೊಳಗೆ ವಾಕ್ಸಮರ ಏರ್ಪಟ್ಟು ಕೊಲೆಗೆ ಕಾರಣವಾಯಿತು. ಘಟನಾ ಸಂದರ್ಭ ಅವರ ಜೊತೆಗಿದ್ದ ಥೊಮಸ್ ನ ಚಿಕ್ಕಪ್ಪನ ಪುತ್ರ ವಿಲ್ಪಿ ಡಿಸೋಜ ತೀರ್ವ ಸ್ವರೂಪದಲ್ಲಿ ಗಾಯಗೊಂಡಿದ್ದು ಪರಿಯಾರಂ ವ್ಯೆದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಮೃತ ಥೋಮಸ್ ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಬದಿಯಡ್ಕ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕ್ಯೆಗೆತ್ತಿಕೊಂಡಿದ್ದಾರೆ.