ಕೋಝಿಕ್ಕೋಡ್: ಪುರಾತತ್ವ ಇಲಾಖೆಯು ಕೋಝಿಕ್ಕೋಡ್ ಟಿಪ್ಪುಕೋಟೆಯಲ್ಲಿ ನಡೆಸಿದ ಅಧ್ಯಯನ ತಪಾಸಣೆಯಲ್ಲಿ ಟಿಪ್ಪುವಿನ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಕೋಟೆಯ ಪಶ್ಚಿಮ ಭಾಗದಲ್ಲಿ ಉತ್ಖನನ ಮಾಡುವಾಗ ಗುಂಡು ಮತ್ತು ಮೊಳೆಯಂತಹ ಆಯುಧ ಕಂಡುಬಂದಿದೆ. ಈ ಪ್ರದೇಶದಲ್ಲಿ ಉತ್ಖನನ ಮುಂದುವರಿದಿದೆ.
ಆಯುಧಗಳು ಸಿಕ್ಕಿದ್ದರಿಂದ ಆ ಸ್ಥಳ ಟಿಪ್ಪುವಿನ ಶಸ್ತ್ರಾಗಾರ ಎಂದು ನಂಬಲಾಗಿದೆ. ಮದ್ದುಗುಂಡುಗಳನ್ನು ಸೀಸದಿಂದ ತಯಾರಿಸಲಾಗಿದೆÉ. ಇದು ಬಹಳಷ್ಟು ಭಾರವೂ ಇದೆ. ತೋಳುಗಳು ಕಬ್ಬಿಣದಿಂದ ಮಾಡಲ್ಪಟ್ಟಿದೆ. ಇವೆಲ್ಲವನ್ನೂ ಪುರಾತತ್ವ ಇಲಾಖೆ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.
ಪುರಾತತ್ವ ಇಲಾಖೆ ಕಳೆದ ವಾರ ಟಿಪ್ಪು ಕೋಟೆಯಲ್ಲಿ ಉತ್ಖನನ ಆರಂಭಿಸಿತ್ತು. ಕೇಂದ್ರ ಸರ್ಕಾರ ಪರಿಶೀಲನೆಗೆ ಅನುಮತಿ ನೀಡಿತ್ತು. ಇದಾದ ಬಳಿಕ ಉತ್ಕನನ ಆರಂಭವಾಯಿತು. ಈ ಹಿಂದೆ ಪರಿಶೀಲನೆ ನಡೆಸಿದಾಗ ಕೋಟೆಯಲ್ಲಿ ಪುರಾತನ ವಸ್ತುಗಳು ಇರುವುದು ಪತ್ತೆಯಾಗಿತ್ತು. ಇದರೊಂದಿಗೆ ವಿವರವಾದ ಅಧ್ಯಯನ ಪ್ರಾರಂಭವಾಯಿತು. ಇತ್ತೀಚಿನ ದಿನಗಳಲ್ಲಿ, ಬ್ರಿಟನ್, ಚೀನಾ ಮತ್ತು ಜಪಾನ್ ಕಲಾಕೃತಿಯ ಮಡಿಕೆಗಳು ಮತ್ತು ಇತರ ಮಡಿಕೆಗಳು ಕಂಡುಬಂದಿದ್ದವು.