ಕುಂಬಳೆ: ಪುತ್ತಿಗೆ ಮುಹಿಮ್ಮಾತ್ ಕಾಲೇಜ್ ಆಫ್ ಇಸ್ಲಾಮಿಕ್ ಸಯನ್ಸ್ ಇಶಾಅತುಸ್ಸುನ್ನ ವಿದ್ಯಾರ್ಥಿ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಬೂಬಕರ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ವೈಸ್ ಪ್ರಿನ್ಸಿಪಾಲ್ ಸಯ್ಯದ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಸೈಯದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್ ಅವರು 2022-2023 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ಅಧ್ಯಕ್ಷರಾಗಿ ಅಮೀನ್ ಕೊಳಕೆ, ಪ್ರಧಾನ ಕಾರ್ಯದರ್ಶಿ ಮಹ್ಶೂಕ್ ಚಿತ್ತಾರಿ, ಕೋಶಾಧಿಕಾರಿಯಾಗಿ ಶುಹೈಬ್ ಕಯ್ಯಾರ್ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಬಾಖಿರ್ ನಾರಂಬಾಡಿ , ಸಲಾಹುದ್ದೀನ್ ಕುತ್ತಾರ್, ಹಾಫಿಳ್ ಸಲಾಹುದ್ದೀನ್ ಕಡಬ, ನೌಫಲ್ ಪೆರ್ನೆ, ನೌಶಾದ್ ಹಸನ್ ನಗರ, ಶರೀಫ್ ಶೆಟ್ಟಿಕೊಪ್ಪ , ಹಾಫಿಳ್ ಆಶಿಕ್ ಉಳ್ಳಾಲ ,ಸ್ವಬಾಹ್ ಸುಳ್ಯ, ಕಿಸ್ಮತ್ ಮಲಿಕ್,ಹಾಫಿಳ್ ಖುಬೈಬ್ ಆಯ್ಕೆಯಾದರು. ಮಾಜಿ ಕಾರ್ಯದರ್ಶಿ ರಂಶಾದ್ ಸ್ವಾಗತಿಸಿದರು. ಮಹ್ಶೂಕ್ ಚಿತ್ತಾರಿ ವಂದಿಸಿದರು.